ರಾಗಿ ಮುದ್ದೆ ಉಂಡವನೇ ಮಹಾಶೂರ: ಸ್ಪರ್ಧೆಯಲ್ಲಿ ಗೆದ್ದವರು ಯಾರು ಗೊತ್ತಾ?

ಭಾನುವಾರ, 1 ಜುಲೈ 2018 (16:13 IST)
ರಾಗಿ ಎಂದರೆ ದಕ್ಷಿಣ ಕರ್ನಾಟಕ ಜನರ ಬಾಯಲ್ಲಿ ನೀರು ಬರುವುದು ಸಹಜ. ಇನ್ನು ರಾಗಿ ಪ್ರಿಯರಿಗಾಗಿಯೇ ಹೆಚ್ಚು ರಾಗಿ ಮುದ್ದೆಗಳನ್ನು ಉಣ್ಣುವ ಸ್ಪರ್ಧೆ ಆಯೋಜಿಸಲಾಗಿತ್ತು ಎಂದರೆ ನಂಬಲೇಬೇಕು. 
 
ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೆಚ್ಚು ರಾಗಿ ಮುದ್ದೆ ತಿಂದವರು ವಿಜೇತರಾಗುತ್ತಾರೆ. ಈ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅಂದಹಾಗೆ ಮಹಿಳೆಯರ ಸಂಖ್ಯೆ ಕಡಿಮೆ ಇರಲಿಲ್ಲ. ಏಕಕಾಲದಲ್ಲಿ ನಾಟಿಕೋಳಿ ಸಾರಿನ ಜತೆ ರಾಗಿ ಮುದ್ದೆ ಸವಿದರು. ಸ್ಪರ್ಧೆಗಾಗಿಯೇ ಒಂದು ಸಾವಿರಕ್ಕೂ ಹೆಚ್ಚು ರಾಗಿ ಮುದ್ದೆಗಳು ಸಿದ್ಧಗೊಂಡಿದ್ದವು. ಏಕಕಾಲದಲ್ಲಿ ನೂರಾರು ಸ್ಪರ್ಧಿಗಳು ರಾಗಿ ಮುದ್ದೆ ತಿಂದು ಬಾಯಿ ಚಪ್ಪರಿಸಿದರು.

ಎಲ್ಲರಿಗಿಂತ ಹೆಚ್ಚು ರಾಗಿ ಮುದ್ದೆ ತಿಂದವರಿಗೆ ನಗದು ಬಹುಮಾನ ಹಾಗೂ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಲಾಗುತ್ತದೆ. ಆರುವರೆ ರಾಗಿ ತಿಂದ ಅರಕೆರೆ ಮೀಸೆ ಪ್ರಥಮ, ಸುರೇಶ ದ್ವೀತಿಯ ಹಾಗೂ ನಂದೀಶ್, ಕಾರಸವಾಡಿ ಶಂಕರೇಗೌಡ, ಹೆಚ್.ಡಿ.ಕೋಟೆ ಯೋಗೇಶ್, ಕಾರೇಕರ ನಾಗೇಶ್ ಗೆ ಸಮಾಧಾನ ಬಹುಮಾನ ವಿತರಿಸಲಾಯಿತು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ