ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಅಧಿನಿಯಮ, (ಪಿಸಿಪಿಎನ್ ಡಿಟಿ) 1994ರನ್ವಯ ಇಂದು ಬೆಂಗಳೂರು ನಗರ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ನಡೆಸಿದ ತಪಾಸಣಾ ಭೇಟಿಯ ನೇತೃತ್ವ ವಹಿಸಿದ ಡಾ.ಶ್ರೀನಿವಾಸ್ ಅವರು ತಪಾಸಣೆ ವೇಳೆ ತಿಳಿಸಿದರು.
ಒಟ್ಟು 11 ಸ್ಕ್ಯಾನಿಂಗ್ ಯಂತ್ರಗಳಿಗೆ ( Scanning Machine ) ಪರವಾನಗಿ ಪಡೆದು ಬಳಸಲಾಗುತ್ತಿದೆ. ಸ್ಕ್ಯಾನಿಂಗ್ ಮುನ್ನ ಫಾರಂ ಎಫ್ ನ್ನು ಕಡ್ಡಾಯವಾಗಿ ಆನ್ ಲೈನ್ ಸಲ್ಲಿಸಿ ನಂತರವೇ ಸ್ಕ್ಯಾನಿಂಗ್ ಮಾಡಬೇಕು. ಆದರೆ, ಇಲ್ಲಿ ಸ್ಕ್ಯಾನಿಂಕ್ ಮಾಡಿದ ನಂತರ ಸಂಜೆ ವೇಳೆಗೆ ಆನ್ ಲೈನ್ ಮಾಹಿತಿ ಅಪ್ ಲೋಡ್ ಮಾಡಲಾಗುತ್ತಿರುವುದು ಕಂಡುಬಂದಿದೆ. ಅಲ್ಲದೇ, ಸ್ಕ್ಯಾನಿಂಗ್ ಕೊಠಡಿಯಲ್ಲಿ ಬ್ರೂಣದ ಚಿತ್ರವನ್ನು ದೊಡ್ಡ ಟಿ.ವಿಯಲ್ಲಿ ಬಿತ್ತರಿಸಿ ತೋರಿಸುವ ವ್ಯವಸ್ಥೆ ಮಾಡಲಾಗಿರುವುದು ಕಾನೂನು ಬಾಹಿರವಾಗಿದೆ.