ಡಿ.ಕೆ. ಶಿವಕುಮಾರ್ ಮನೆ ಮೇಲಿನ ದಾಳಿ ರಾಜಕೀಯಪ್ರೇರಿತ: ಸಿಎಂ ಸಿದ್ದರಾಮಯ್ಯ
ಶುಕ್ರವಾರ, 4 ಆಗಸ್ಟ್ 2017 (15:14 IST)
ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ ರಾಜಕೀಯಪ್ರೇರಿತ. ದಾಳಿಯ ಸಮಯವೂ ಸಹ ಇದೊಂದು ರಾಜಕೀಯಪ್ರೇರಿತ ದಾಳಿ ಎಂಬುದನ್ನ ತೋರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದೇ ಮನೆ ಮೇಲೆ ಐಟಿ ದಾಳಿ ಬಗ್ಗೆ ನನ್ನ ವಿರೋಧವಿಲ್ಲ. ಆದರೆ, ದಾಳಿ ಮಾಡಿದ ಸಮಯ ಮತ್ತು ಉದ್ದೇಶ ಸರಿಯಾದುದಲ್ಲ. ಗುಜರಾತ್ ಶಾಸಕರು ಇಲ್ಲಿಗೆ ಬಂದಿರುವ ಸಂದರ್ಭದಲ್ಲೇ ದಾಳಿ ನಡೆದಿದೆ.
ಐಟಿ ದಾಳಿ ವೇಳೆ ಸ್ತಳೀಯ ಪೊಲೀಸರ ನೆರವು ಪಡೆಯುತ್ತರೆ. ಈ ಬಾರಿ ಐಟಿ ಅಧಿಕಾರಿಗಳು ಸಿಆರ್`ಪಿಎಫ್ ಕರೆತಂದಿದ್ದಾರೆ. ಇದು ಅವರ ಉದ್ದೇಶ ತೋರಿಸುತ್ತದೆ ಎಂದಿದ್ದಾರೆ. ದಾಳಿಯಲ್ಲಿ ಏನು ಸಿಕ್ಕಿದೆ, ಏನು ಸಿಕ್ಕಿಲ್ಲ ಎಂಬುದು ನಮ್ಮ ಯಾರಿಗೂ ಗೊತ್ತಿಲ್ಲ. ದಾಳಿಗೆ ಸಿಆರ್`ಪಿಎಫ್ ಬಳಸಿದ್ದೇಕೆ ಎಂದು ಸಿಎಂ ಪ್ರಶ್ನಿಸಿದ್ದಾರೆ.
ಇದೇವೇಳೆ, ಡಿ.ಕೆ. ಶಿವಕುಮಾರ್ ರಾಜೀನಾಮೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಒತ್ತಾಯಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಅನಂತ್ ಕುಮಾರ್ ಮೇಲೂ ಭ್ರಷ್ಟಾಚಾರ ಆರೋಪವಿದೆ. ತನಿಖೆ ಈಗಲೂ ನಡೆಯುತ್ತಿದೆ. ಕರ್ನಾಟಕದ ಹಲವು ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಯಡಿಯೂರಪ್ಪನ ವಿರುದ್ಧ ಭ್ರಷ್ಟಾಚಾರ ಆರೋಪವಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ