ಮಧ್ಯಾಹ್ನವೇ ಸಿಲಿಕನ್ ಬೆಂಗಳೂರಿಗೆ‌ ಮಳೆ ಎಂಟ್ರಿ

ಮಂಗಳವಾರ, 30 ಮೇ 2023 (17:47 IST)
ಬೆಂಗಳೂರಿನ‌ ಹಲವು ಕಡೆ  ಮಧ್ಯಾಹ್ನವೇ ಮಳೆ ಆರಂಭವಾಗಿದೆ.ಇಂದಿರಾನಗರ, ಬಾಣಸವಾಡಿ, ದೊಮ್ಮಲೂರು, ಹೆಚ್ ಬಿಆರ್ ಲೇಜೌಟ್ ,ಜಾಲಹಳ್ಳಿ, ಮತ್ತಿಕೆರೆ, ಯಶವಂತಪುರ, ಮತ್ತಿಕೆರೆಯಲ್ಲಿ ರಣಮಳೆಯಾಗಿದೆ.ಜಾಲಹಳ್ಳಿ, ನಂದಿನಿಲೇಔಟ್, ಮತ್ತಿಕೆರೆಯಲ್ಲೂ ಮಳೆಯಾಗಿದೆ.ಮಲ್ಲೇಶ್ವರಂ, ಸದಾಶಿವನಗರದಲ್ಲಿ ಜಿಟಿ‌ಜಿಟಿ‌ ಮಳೆಯಾಗಿದ್ದು,ಗಾಳಿ ಗುಡುಗು ಸಹಿತ ನಗರದಲ್ಲಿ ಭಾರಿ ಮಳೆಯಾಗಿದೆ.
 
ರಾಜಧಾನಿ ಯಲ್ಲಿ ಇಂದು ಕೂಡ ವರುಣನ ಅಬ್ಬರ ಇಂದು ಮುಂದುವರೆದಿದ್ದು,ಕೆ. ಆರ್ ಮಾರುಕಟ್ಟೆ ರಾಜಾಜಿನಗರ ಟೌನ್ ಹಾಲ್ ಸೇರಿದಂತೆ ಇನ್ನೂ ಹಲವು ಕಡೆ ಮಳೆಯಾಗಿದೆ.ಮಳೆಗೆ ವಾಹನ ಸವಾರರು ಬೇಸೆತ್ತಿದ್ರು‌.ಬೀದಿ ಬದಿ ವ್ಯಾಪಾರಿಗಳಿಗೆ  ಮಳೆರಾಯ ಕಂಟಕವಾಗಿದೆ.ಮಳೆಯಿಂದಾಗಿ ವ್ಯಾಪಾರ ಮಾಡಲು ಬೀದಿ ಬದಿ ವ್ಯಾಪಾರಿಗಳು ಕಷ್ಟಪಾಟ್ಟಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ