ರಾತ್ರಿ ಸುರಿದ ಮಳೆಗೆ ಬೆಂಗಳೂರು ತತ್ತರ

ಮಂಗಳವಾರ, 7 ನವೆಂಬರ್ 2023 (13:44 IST)
ಬೆಂಗಳೂರಲ್ಲಿ ‌ತಡರಾತ್ರಿ ಸುರಿದ  ಬಾರೀ ಮಳೆ ಹಿನ್ನೆಲೆ ಯಲಹಂಕ ಬಳಿಯ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಗೆ ಮಳೆ ನೀರು ನುಗ್ಗಿದೆ.ಅಪಾರ್ಟ್ಮೆಂಟ್ ಬಳಿ ಬಂದು ಅಗ್ನಿಶಾಮಕ ದಳ ನೀರು ತೆರವು ಮಾಡಿದೆ.ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್ ಮೆಂಟ್ ಬಳಿ ಒಂದು ಅಗ್ನಿಶಾಮಕ ದಳ ವಾಹನ ನಿಯೋಜನೆ ಮಾಡಿತ್ತು.ಅಪಾರ್ಟ್ಮೆಂಟ್ ನ ಬೇಸ್ಮೆಂಟ್ ನ್ನ ಕಾರು, ಬೈಕ್ ಗಳು ಮುಳುಗಿದ್ದು,ಮಳೆ ನೀರನ್ನ ಲ ಅಗ್ನಿಶಾಮಕ ಸಿಬ್ಬಂದಿ ತೆರವುಮಾಡಿದ್ದಾರೆ.
 
ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದು,ವಾಹನಸವಾರರು ಪರದಾಟ ನಡೆಸಿದ್ದಾರೆ.ಈಗ
ಹಲವು ಅಂಡರ್ ಪಾಸ್ ಗಳಲ್ಲಿ ಮೊಣಕಾಲುದ್ದ ನೀರು ನಿಂತಿದೆ.ಮಲ್ಲೇಶ್ವರಂ, ಶಾಂತಿನಗರ, ಮೈಸೂರು ಬ್ಯಾಂಕ್ , ಟೌನ್ ಹಾಲ್ ಸೇರಿ ಹಲವೆಡೆ ಧಾರಕಾರ ಮಳೆಯಾಗಿದೆ.ಸಂಜೆ ಸಾಧಾರಣವಾಗಿ ಆರಂಭವಾದ ಮಳೆ ನಂತರ ಕೊಂಚ ರಿಲೀಪ್ ಕೊಟ್ಟಿತ್ತು.ರಾತ್ರಿಯಾಗುತ್ತಿದ್ದಂತೆ ಮತ್ತೆ ಮಳೆ ಜೋರಾಗಿದೆ.ಮಳೆಯಿಂದಾಗಿ  ಶ್ರೀರಾಂಪುರ ಅಂಡರ್ ಪಾಸ್ ,ಬಾಣಸವಾಡಿ ಬಳಿಯ ಲಿಂಗರಾಜಪುರಂ ಫ್ಲೈ ಓವರ್ ಕೆಳಗಿನ ಅಂಡರ್ ಪಾಸ್ ಜಲಾವೃತವಾಗಿದೆ.

ಫ್ರೆಜರ್ ಟೌನ್ ನಿಂದ ಹೆಣ್ಣೂರು ಮುಖ್ಯರಸ್ತೆಯಲ್ಲಿ ಬರುವ ಮೇಲ್ಸೇತುವೆಯ ಅಂಡರ್ ಪಾಸ್ ಜಲಾವೃತ ಆದ್ದ ಹಿನ್ನೆಲೆ ವಾಹನ ಸವಾರರು ಪರದಾಟ ನಡೆಸಿದ್ದಾರೆ.ಕುರುಬರ ಹಳ್ಳಿಯಲ್ಲಿ ಮನೆಗಳಿಗೆ  ನೀರು ನುಗ್ಗಿದೆ.ಮನೆಗಳಿಗೆ ಮಳೆನೀರು ನುಗ್ಗಿ ಪಾತ್ರೆ, ಸಿಲೆಂಡರ್, ಹಾಸಿಗೆ ಎಲ್ಲವೂ ನೀರ್ಪಾಲಾಗಿದೆ.ಮನೆಗಳಿಗೆ ನುಗಿದ್ದ ನೀರನ್ನು ತೆರವು ಮಾಡೋದೆ ಒಂದು ಕೆಲಸವಾಗಿತ್ತು.ಬಿಬಿಎಂಪಿ,  ಸರ್ಕಾರಕ್ಕೆ ಜನತೆ ಹಿಡಿಶಾಪ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ