ನಗರದಲ್ಲಿ ಮಳೆ ಆರ್ಭಟ- ರೈತನ ಬೆಳೆ ಜಲಾವೃತ

ಮಂಗಳವಾರ, 6 ಸೆಪ್ಟಂಬರ್ 2022 (20:14 IST)
ಸತತವಾಗಿ ಸುರಿದ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ.ಕಾಡುಗೋಡಿ ಸಮೀಪದ ಬೆಳ್ತೂರಿನಲ್ಲಿ ರೈತ ಬೆಳೆದ ಬೆಳೆ ಜಲಾವೃತ್ತವಾಗಿದೆ.ಸುಮಾರು ಮೂವತ್ತಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದ ಬೆಳೆ ನಾಶವಾಗಿದೆ.
 
ಕೆ.ಆರ್ ಪುರಂನ ಎಲೆ ಮಲ್ಲಪ್ಪನ ಕೆರೆ ಕೋಡಿ ಬಿದ್ದ ಪರಿಣಾಮ ಬೆಳೆ ನಷ್ಟ ಉಂಟಾಗಿದೆ.ರೈತರು ಬೆಳೆದ ಹೂವಿನ ತೋಟವಂತೂ ಸಂಪೂರ್ಣವಾಗಿ ಹಾನಿಯಾಗಿದೆ.ಸುಗಂಧ ರಾಜ ಹೂವಿನ ತೋಟ ಮತ್ತು ರಾಗಿ ಬೆಳೆದ ಬೆಳೆ ಹಾನಿಯಾಗಿದ್ದು,ತೋಟದ ಮನೆ ಸಂಪೂರ್ಣವಾಗಿ ಜಲಾವೃತವಾಗಿದೆ.ಬೆಳೆದ ಬೆಳೆ ನಂಬಿಕೊಂಡಿದ್ದ ರೈತರು ಈಗ ಕಂಗಾಲಾಗಿದ್ದಾರೆ.ಸರ್ಕಾರಕ್ಕೆ ಕೂಡಲೇ ನಮಗೆ ನೆರೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
 
ರಾಜ ಕಾಲುವೆ ಒತ್ತುವರಿಯಿಂದಾಗಿ ತೋಟಕ್ಕೂ ಮಳೆ ನೀರು ನುಗ್ಗಿದೆ.ಲಕ್ಷಾಂತರ ಹಣ ಹಾಕಿ  ಬೆಳೆದ ಬೆಳೆಗಳು ನಾಶವಾಗಿ ರೈತರು ಈಗ ಬೀದಿಪಾಲಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ