ಮುಂದಿನ ಎರಡು ತಿಂಗಳು ವಾಡಿಕೆಗಿಂತ ಕಮ್ಮಿ ‌ಮಳೆ... ರೈತಾಪಿ ವರ್ಗದ ಜೀವನ ಹೈರಾಣು

ಭಾನುವಾರ, 6 ಆಗಸ್ಟ್ 2023 (18:01 IST)
ಬಹುತೇಕ ಜಿಲ್ಲೆಗಳಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ವಾಡಿಕೆ ಪ್ರಮಾಣದ ಅರ್ಧದಷ್ಟು ಕಡಿಮೆ ಮಳೆ ಸಾಧ್ಯತೆ ಇದೆ.ಕರಾವಳಿ ಭಾಗ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಶೇಕಡಾ 40 ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆ ಇದೆ.ಈ ಬಾರಿ ಮುಂಗಾರು ಆರಂಭದಲ್ಲೇ ಮಳೆ ಕೊರತೆ ಉಂಟಾಗಿದೆ.ಜುಲೈನಲ್ಲಿ ಸುರಿದ ಮಳೆಯಿಂದ ಸ್ವಲ್ಪ ಮಟ್ಟಿಗೆ ಚೇತರಿಕೆಯಾಗಿದ್ದು,ನಿರಾಳವಾಗುಷ್ಟರಲಿ ಮತ್ತೆ ರಾಜ್ಯದಲ್ಲಿ ಮಳೆರಾಯ ಕೈ ಕೊಟ್ಟಿದೆ.ಹೀಗಾಗಿ ಮಳೆ ಕಡಿಮೆಯಾಗಿದ್ದು ರೈತಾಪಿ ವರ್ಗಗಳಲ್ಲಿ ಆತಂಕ ಉಂಟಾಗಿದೆ.
 
ಜುಲೈ ಕೊನೆಯ ವಾರದಲ್ಲಿ  ಬಿತ್ತನೆ ಕೆಲಸ ಕಾರ್ಯದಲ್ಲಿ ರೈತರು ತೊಡಗಿಕೊಂಡಿದ್ದು,ಬರಿದಾಗಿದ್ದ ರಾಜ್ಯದ ಕೆರೆ, ಕುಂಟೆ, ಜಲಾಶಯಗಳಿಗೆ ಒಂದಿಷ್ಟು ನೀರು ಹರಿದು ಬಂದಿದ್ದು, ನಿಟ್ಟುಸಿರು ಬಿಡುವಂತಾಗಿತ್ತು.ಮತ್ತೆ ಮಳೆ ಕೈಕೊಡಲಿದೆ ಎಂಬ ವಿಚಾರ ರೈತರನ್ನು ಆತಂಕಕ್ಕೆ ದೂಡಿದೆ.ಈಗಾಗಲೇ ಮಲೆನಾಡು ಪ್ರದೇಶ ಶೇ.27ರಷ್ಟುಮಳೆ ಕೊರತೆಯಾಗಿದೆ.ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ತಲಾ ಶೇ.7ರಷ್ಟುಮಳೆ ಕೊರತೆಯಾಗಿದೆ.ಮಳೆ ಕೊರತೆ ಉಂಟಾದರೆ ಕೃಷಿ ಚಟುವಟಿಕೆ ಮೇಲೆ ಭಾರೀ ಪರಿಣಾಮ ಬೀರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ