ಬೆಂಗಳೂರಿನಲ್ಲಿ 3 ದಿನಗಳ ಕಾಲ ತಂಪೆರೆಯುವ ಮಳೆ

ಶುಕ್ರವಾರ, 6 ಮೇ 2016 (15:38 IST)
ಬೆಂಗಳೂರಿನಲ್ಲಿ ಗುರುವಾರ ಬೇಸಿಗೆಯ ಸುಡುಬಿಸಿಲಿನಿಂದ ಕಂಗಾಲಾದ ಜನರಿಗೆ ಮುಂಗಾರು ಪೂರ್ವ ಮಳೆ ತಂಪೆರೆಯಿತು. ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಇನ್ನೂ ಮೂರು ದಿನಗಳ ಕಾಲ ಹಗುರ ಮಳೆಯ ಮುನ್ಸೂಚನೆ ನೀಡಿದ್ದು, ಬೆಂಗಳೂರು ನಿವಾಸಿಗಳಿಗೆ ಶುಭ ಸುದ್ದಿಯಾಗಿದೆ.
 
ನಗರದಲ್ಲಿ ಗುರುವಾರ 1.8 ಮಿಮೀ ಮಳೆ ದಾಖಲಾಯಿತು. ಗರಿಷ್ಠ ಉಷ್ಣಾಂಶವು ಬುಧವಾರ 35.6 ಡಿಗ್ರಿಗಳು ಇದ್ದಿದ್ದು ಗುರುವಾರ 35.5 ಡಿಗ್ರಿಗೆ ಕುಸಿಯಿತು. ವಿದರ್ಭದಲ್ಲಿ ವಾಯುಭಾರ ಕುಸಿತದ ಫಲವಾಗಿ ಮಳೆ ಬಿದ್ದಿದೆ ಎಂದು ಹವಾಮಾನ ಕೇಂದ್ರದ ನಿರ್ದೇಶಕ ಮೇತ್ರಿ ತಿಳಿಸಿದ್ದಾರೆ.

ಮುಂದಿನ ಆರು ದಿನಗಳ ಕಾಲ ಆಂಶಿಕ ಮೋಡಕವಿದ ಆಕಾಶ ಮತ್ತು ಮಳೆಯ ಸಾಧ್ಯತೆಯ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ