ಅಪ್ಪುಗೆ ಪೂಜೆ ಸಲ್ಲಿಸಿದ ರಾಜ್​ ಫ್ಯಾಮಿಲಿ

ಶನಿವಾರ, 29 ಅಕ್ಟೋಬರ್ 2022 (15:17 IST)
ಅಪ್ಪು ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ದೊಡ್ಮನೆ ಕುಟುಂಬ ಅಪ್ಪು ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ರಾಜ್ ಫ್ಯಾಮಿಲಿ ಅಪ್ಪುಗೆ ಇಷ್ಟವಾದ ತಿಂಡಿ ತಿನಿಸು ಮಾಡಿ ವಿಶೇಷ ನೈವೇದ್ಯವನ್ನು ಅರ್ಪಿಸಿದರು. ಅಪ್ಪು ಸಮಾಧಿಯತ್ತ ಬರುತ್ತಿದ್ದಂತೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಹಾಗು ಮಕ್ಕಳು ಭಾವಕದರು. ತಂದೆಯನ್ನು ನೆನೆದು ಭಾವುಕರಾದ ಅಪ್ಪು ಪುತ್ರಿಯನ್ನು ರಾಘವೇಂದ್ರ ರಾಜ್​ಕುಮಾರ್​ ಸಂತೈಸಿದರು. ಇನ್ನು ಗಾಜನೂರಿನಿಂದಲೂ ಸಂಬಂಧಿಕರು ಬಂದಿದ್ದರು. ಇಡೀ ದೊಡ್ಮನೆ ಕುಟುಂಬ ಅಪ್ಪು ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿದ್ಧಾರೆ. ಇನ್ನು ಡಾ.ರಾಜ್​​ಕುಮಾರ್​​, ಪಾರ್ವತಮ್ಮ ಸಮಾಧಿಗೂ ಪೂಜೆ ಸಲ್ಲಿಸಲಾಯ್ತು. ಅಪ್ಪು ಆಪ್ತರು, ಸ್ನೇಹಿತರು ಪೂಜೆಯಲ್ಲಿ ಭಾಗಿಯಾಗಿದ್ರು. ಕಂಠೀರವ ಸ್ಟೂಡಿಯೋದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ