ರಾಜಣ್ಣ ಸತ್ಯ ಹೇಳಿದ್ದು, ಕಾಂಗ್ರೆಸ್‌ನವರ ಹೊಟ್ಟೆಗೆ ಮೆಣಸಿಟ್ಟ ಹಾಗಾಗಿದೆ: ಆರ್ ಅಶೋಕ್‌

Sampriya

ಸೋಮವಾರ, 11 ಆಗಸ್ಟ್ 2025 (16:43 IST)
ಬೆಂಗಳೂರು: ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ನೇರನುಡಿಯವರು. ಅವರು ಸತ್ಯ ಹೇಳಿದ ತಕ್ಷಣ ಕಾಂಗ್ರೆಸ್‌ನವರ ಹೊಟ್ಟೆಗೆ ಮೆಣಸಿನಟ್ಟ ಹಾಗಾಗಿದ್ದು, ಅದಕ್ಕೆ ರಾಜಣ್ಣ ಅವರ ತಲೆದಂಡ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಪ್ರತಿಕ್ರಿಯಿಸಿದ್ದಾರೆ. 

ಸಚಿವ ಕೆ ಎನ್ ರಾಜಣ್ಣ ಅವರ ರಾಜೀನಾಮೆ ಸಂಬಂಧ ಪ್ರತಿಕ್ರಿಯಿಸಿದ ಅವರು ಮತಗಳ್ಳತನ ಬಗ್ಗೆ  ಸತ್ಯ ನುಡಿದಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಶುರುವಾಗಿತ್ತು. ಅದಕ್ಕೆ ರಾಜಣ್ಣಗೆ ಲೆಟರ್ ಕೊಟ್ಟಿದ್ದಾರೆ.  ಅದಲ್ಲದೆ ಅವರನ್ನು ಸಸ್ಪೆಂಡ್ ಮಾಡುವಂತೆಯೇ ಹೇಳಲಾಗಿತ್ತು. 

ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವ ಇಲ್ಲ.  ಸತ್ಯ ಹೇಳಿದ್ದವರನ್ನು ತಲೆದಂಡ ಮಾಡಲಾಗುತ್ತೆ. ಮತಗಳ್ಳತನ ಕಾರ್ಯಕ್ರಮ ಅವರದ್ದು ಟುಸ್ ಪಟಾಕಿಯಾಗಿದೆ.

ಅಕ್ಟೋಬರ್‌ನಲ್ಲಿ ಪ್ರಳಯ ಆಗುತ್ತಾ ಅಂತಾ ಹೇಳಲಾಗಿತ್ತು. ಇದೀಗ ಅದರ ಮುನ್ಸೂಚನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ