ಕರ್ನಾಟಕದ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಆಯ್ಕೆಯಾಗಿದ್ದರಿಂದ ತೆರವಾದ ರಾಜ್ಯಸಭಾ ನಾಯಕರಾಗಿ ಮಾಜಿ ಸಚಿವ ಪಿಯೂಶ್ ಗೋಯೆಲ್ ನೇಮಕಗೊಂಡಿದ್ದಾರೆ.
ಕಳೆದ ವಾರ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ರಾಮನಾಥನ್ ಕೋವಿಂದ್ ನೇಮಕ ಮಾಡಿದ್ದರು. ಭಾನುವಾರ ರಾಜ್ಯದ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಥಾವರ್ ಚಂದ್ ಗೆಹ್ಲೋಟ್ ರಾಜೀನಾಮೆಯಿಂದ ತೆರವಾದ ಜಾಗಕ್ಕೆ ಪಿಯೂಶ್ ಗೋಯೆಲ್ ನೇಮಕಗೊಂಡಿದ್ದು, ಮುಂಬರುವ ಸಂಸತ್ ಅಧಿವೇಶನದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇರಿಸಲಾಗಿದೆ.
2010ರಿಂದ ಗೋಯೆಲ್ ರಾಜ್ಯಸಭಾ ಸದಸ್ಯರಾಗಿದ್ದು, ಹಲವಾರು ಮಹತ್ವದ ಚರ್ಚೆ ಹಾಗೂ ಮಸೂದೆ ಮಂಡನೆ ವೇಳೆ ಪ್ರತಿಪಕ್ಷಗಳ ಒಲವು ಗಳಿಸಿ ಸರಕಾರದ ಕೈ ಮೇಲಾಗಲು ನೆರವಾಗಿದ್ದರು.