ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ ಆಗಿರುವಂತೆ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ.
ಈ ನಡುವೆ ಪಕ್ಷೇತರ ಶಾಸಕ ಆರ್ ಶಂಕರ್ ಹೇಳಿಕೆ ನೀಡಿದ್ದು, ಈಗಲೇ ನಾನು ಏನೂ ಮಾತನಾಡೋದಿಲ್ಲ. ಕೆಪಿಸಿಸಿ ಅಧ್ಯಕ್ಷರು ಸೌಜನ್ಯಕ್ಕೆ ಬರಲು ಹೇಳಿದ್ದರು ಬಂದಿದ್ದೇನೆ. ನೋಡೋಣ ಕಾಂಗ್ರೆಸ್ ಯಾವಾಗ ಸೇರೋದು ಅಂತ.
ಸಚಿವ ಸ್ಥಾನ ಸಿಕ್ಕಿದ ಮೇಲೆ ತಾನೇ ಎಲ್ಲರೂ ಅಭಿನಂದನೆ ಹೇಳೋದು.? ನನಗೂ ಸಚಿವ ಸ್ಥಾನದ ಅಧಿಕೃತ ಮಾಹಿತಿ ಬಂದಿಲ್ಲ. ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಗೌಪ್ಯತೆ ಕಾಪಾಡಿಕೊಳ್ಳುವುದಾಗಿ ಮಾಧ್ಯಮಗಳಲ್ಲಿ ಹೇಳಿದ್ದನ್ನು ಗಮನಿಸಿದ್ದೇನೆ. ನೋಡೋಣ ಏನೇನಾನಗತ್ತೆ ಅಂತ ಎಂದಿದ್ದಾರೆ.
ಇನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಮಲಿಂಗ ರೆಡ್ಡಿಗೆ ಸ್ಥಾನ ದೊರಕುವ ಸಾಧ್ಯತೆಗಳು ದಟ್ಟವಾಗಿವೆ. ಬಿ.ಸಿ.ಪಾಟೀಲ್ ಬದಲು ರಾಮಲಿಂಗ ರೆಡ್ಡಿಯನ್ನು ಸಂಪುಟಕ್ಕೆ ಸೇರಿಸಲು ಮಾತುಕತೆ ನಡೆಯುತ್ತಿದೆ.
ಸಿದ್ದರಾಮಯ್ಯ ಜೊತೆ ರಾಮಲಿಂಗ ರೆಡ್ಡಿ ಬಾಂಧವ್ಯ ಮತ್ತೆ ಕುದುರಿರುವ ಹಿನ್ನೆಲೆಯಲ್ಲಿ ಚರ್ಚೆ ನಡೆಯುತ್ತಿದೆ. ಅತೃಪ್ತರಿಗೆ ಕೊಟ್ಟರೆ ಮತ್ತೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಮಲಿಂಗ ರೆಡ್ಡಿಗೆ ಸ್ಥಾನ ಸಿಗೋದು ಪಕ್ಕಾ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.