‘ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಸಿಎಂ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ’

ಸೋಮವಾರ, 19 ಮಾರ್ಚ್ 2018 (12:29 IST)
ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ಉರುಳು ಸಿಎಂ ಸಿದ್ದರಾಮಯ್ಯಗೆ ಬಿಗಿಯಾಗುವ ಸಾಧ್ಯತೆ ಕಂಡುಬರುತ್ತಿದೆ. ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ಕೊಟ್ಟರೆ ತಕ್ಕ ಸಿಎಂ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರಂಭಾಪುರಿ ಶ್ರೀ ಎಚ್ಚರಿಕೆ ನೀಡಿದ್ದಾರೆ.

ವೀರಶೈವ ಸಮುದಾಯದ ಸ್ವಾಮೀಜಿಗಳು ಲಿಂಗಾಯತ-ವೀರಶೈವ ಒಂದೇ ಎನ್ನುತ್ತಿದೆ. ಪ್ರತ್ಯೇಕ ಧರ್ಮ ರಚನೆಯಾಗಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಇದೀಗ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಂಭಾಪುರಿ ಶ್ರೀಗಳು ಸಿಎಂ ಕೆಲವೇ ಕೆಲವು ಸ್ವಾಮೀಜಿಗಳ ಅಭಿಪ್ರಾಯ ಆಲಿಸಿದ್ದಾರೆ ಎಂದು ದೂರಿದ್ದಾರೆ.

ಅಷ್ಟೇ ಅಲ್ಲ, ತಜ್ಞರ ಸಮಿತಿ ರಚಿಸಿದ್ದೇ ತಪ್ಪು. ನ್ಯಾ. ಮೋಹನ್ ದಾಸ್ ವರದಿಯಿಂದ ನ್ಯಾಯ ಸಿಗಲ್ಲ. ಮಹದಾಯಿ, ಕಾವೇರಿ ವಿವಾದದ ಬಗ್ಗೆಯೂ ಸರ್ಕಾರ ಇಷ್ಟೊಂದು ತರಾತುರಿಯ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈಗ ಚುನಾವಣೆ ಹತ್ತಿರದಲ್ಲಿರುವಾಗ ಯಾಕೆ ಈ ಆತುರ? ಎಂದು ಶ್ರೀಗಳು ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ