ರಮೇಶ್ ಮುಂಬೈನಲ್ಲಿದ್ದಾರೆ ಎಂದ ಸಚಿವ ಸತೀಶ್!

ಶನಿವಾರ, 9 ಫೆಬ್ರವರಿ 2019 (18:20 IST)
ಸಚಿವ ಸ್ಥಾನದಿಂದ ವಂಚಿತರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂಬೈನಲ್ಲಿದ್ದಾರೆ. ಹೀಗಂತ ಅವರ ಸಹೋದರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಖಚಿತಪಡಿಸಿದ್ದಾರೆ.

ಶಾಸಕ ರಮೇಶ್   ಮುಂಬೈನಲ್ಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ರಮೇಶ್ ಗೋಕಾಕ್ ನಲ್ಲಿ ಇಲ್ಲ, ಮುಂಬೈನಲ್ಲಿದ್ದಾರೆ. ಕೆಲವರು ಅತೃಪ್ತರಿದ್ದಾರೆ ಎನ್ನುವುದು ನಿಜ ಎಂದು ಹೇಳಿದ್ದಾರೆ.

ದಾವಣಗೆರೆಯ ಹರಿಹರ ವಾಲ್ಮೀಕಿ ಪೀಠದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, 7 ತಿಂಗಳಿನಿಂದ ನೋಡುತ್ತಲೆ ಇದ್ದೇವೆ ಸರ್ಕಾರ ಬೀಳಲ್ಲ. ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ ಎಂದರು.

ಸಿಎಂ ಕುಮಾರಸ್ವಾಮಿ ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಬಗ್ಗೆ ಹಲವರು ವರ್ಣನೆ ಮಾಡಿದ್ದೆ ಸಾಕ್ಷಿಯಾಗಿದೆ. ಕೃಷಿ, ನೀರಾವರಿಗೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು. ಬಿಎಸ್ ವೈ ಅವರದ್ದು ಎನ್ನಲಾಗಿರುವ ಆಡಿಯೋ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಹೇಳಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ