ಸತೀಶ್ ಜಾರಕಿಹೊಳಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ

ಭಾನುವಾರ, 22 ಸೆಪ್ಟಂಬರ್ 2019 (14:44 IST)
ಬೆಳಗಾವಿ : ಶಾಸಕ ಸತೀಶ್ ಗೆ ಗೋಕಾಕ್ ಕ್ಷೇತ್ರದ ಜನರು ಬುದ್ಧಿ ಕಲಿಸುತ್ತಾರೆ ಎಂದು ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.




ಅಂಬಿರಾವ್ ಪಾಟೀಲ್ ವಿರುದ್ಧ ಆರೋಪ ಮಾಡಿದ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಆಕ್ರೋಶಗೊಂಡ  ರಮೇಶ್ ಜಾರಕಿಹೊಳಿ, ಸತೀಶ್ ಹತಾಷೆಯಿಂದ ಅಂಬಿರಾವ್ ವಿರುದ್ಧ ಮಾತನಾಡುತ್ತಿದ್ದಾರೆ. ಅಂಬಿರಾವ್ ಕ್ಷೇತ್ರದ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಅಂಬಿರಾವ್ ವಿರುದ್ಧ ಆರೋಪ ಸಾಬೀತಾದರೆ ಅಂದೇ ಆತನನ್ನು ಆ ಸ್ಥಾನದಿಂದ ಕೆಳಗಿಳಿಸುತ್ತೇನೆ ಎಂದು ಹೇಳಿದ್ದಾರೆ.


ಕ್ಷೇತ್ರದ ಜನ ನನ್ನನ್ನು ಕೈಬಿಡಲ್ಲ. ನಾನು ಎಲ್ಲೇ ಕುಳಿತರೂ ನನ್ನನ್ನು ಗೆಲ್ಲಿಸುತ್ತಾರೆ. ನನ್ನನ್ನು ಗೆಲ್ಲಿಸದಿದ್ದರೆ ಜೀರೋ ಆಗುತ್ತೇನೆ, ಶಾಸಕ ಸತೀಶ್ ಜಾರಕಿಹೊಳಿ ಯಾವುದೇ ಸಾಮ್ರಾಜ್ಯ ಕಟ್ಟಿಲ್ಲ. ನಮ್ಮ ತಂದೆಯ ಆದರ್ಶ ನಡೆಯಿಂದ ಈ ಮಟ್ಟಕ್ಕೆ ಬಂದಿದ್ದಾನೆ. ಲಖನ್ ಶಾಸಕರಾದರೆ ಮೊದಲು ನಾನೇ ಸಂತೋಷಪಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ