ಪರಿಹಾರ ಕೇಂದ್ರದಲ್ಲಿ ಜ್ವರದಿಂದ ಬಾಲಕ ಸಾವು; 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ ಸಿಎಂ

ಮಂಗಳವಾರ, 10 ಸೆಪ್ಟಂಬರ್ 2019 (10:19 IST)
ಬೆಳಗಾವಿ : ಬೆಳಗಾವಿಯ ಸುರೇಬಾನ್ ನ ಪರಿಹಾರ ಕೇಂದ್ರದಲ್ಲಿ ಬಾಲಕನೊಬ್ಬ 2 ದಿನದಿಂದ ಜ್ವರದಿಂದ ಬಳಲುತ್ತಿದ್ದ ಹಿನ್ನಲೆ ಇಂದು ಸಾವನಪ್ಪಿದ್ದಾನೆ.
ಮೃತಪಟ್ಟ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಿ ಸಿಎಂ ಇಂದು ಬಾಲಕ ಮೃತಪಟ್ಟಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಾಲಕ ಯಾವ ಕಾರಣಕ್ಕೆ ಮೃತಪಟ್ಟಿದ್ದಾನೆ ಅನ್ನೋದು ಗೊತ್ತಿಲ್ಲ. ಬಾಲಕ ಮೃತಪಟ್ಟಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಲಿದ್ದೇನೆ. ಅವನ ಸಾವಿಗೆ ಕಾರಣ ಏನೆಂಬುದರ ಬಗ್ಗೆ ಮಾಹಿತಿ ಪಡೆಯುತ್ತೇನೆ  ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ