ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ದಿಡೀರ್ ಪ್ರತ್ಯಕ್ಷ
ಸಿಡಿಯನ್ನು ರಮೇಶ್ ಜಾರಕಿಹೊಳಿಯೇ ಬಿಡುಗಡೆ ಮಾಡಿದ್ದಾರೆ. ನನಗೆ ಅವರಿಂದ ಮೋಸ ಆಗಿದೆ. ಘಟನೆ ಬಹಿರಂಗವಾದ ಬಳಿಕ ನನ್ನ ತಂದೆ-ತಾಯಿ ತೀವ್ರವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು. ನಾನೂ ಎರಡು ಬಾರಿ ಆತ್ಮಹತ್ಯೆಗೆ ಮುಂದಾಗಿದ್ದೆ. ನಮಗೆ ಈಗ ಭದ್ರತೆ ಬೇಕು. ಇದಕ್ಕಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿಗೂ ಮನವಿ ಮಾಡುತ್ತೇನೆ ಎಂದು ಯುವತಿ 34 ಸೆಕೆಂಡುಗಳ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾಳೆ.