ರಮೇಶ್ ಜಾರಕಿಹೊಳಿಯವರ ಪ್ರೀತಿಯ ಲಕ್ಕ್ಷ್ಮೀ ಮಾರಾಟಕ್ಕೆ

ಬುಧವಾರ, 19 ಜನವರಿ 2022 (15:16 IST)
ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ಬಂಗಲೆ `ಲಕ್ಷ್ಮೀ' ಮಾರಾಟಕ್ಕಿಡಲಾಗಿದೆ.
 
ಸದಾಶಿವನಗರದಲ್ಲಿ ಉದ್ಯಮಿ ರವಿ ಅವರಿಂದ ಖರೀದಿಸಿದ್ದ ಬಂಗಲೆಯನ್ನು ರಮೇಶ್ ಜಾರಕಿಹೊಳಿ ಮಾರಲು ನಿರ್ಧರಿಸಿದ್ದು, ಇದರ ಬೆಲೆ 40 ಕೋಟಿ ರೂ.ಹೊಸ ಮನೆಗೆ ಬಂದ ಮೇಲೆ ಪದೇಪದೆ ರಮೇಶ್ ಜಾರಕಿಹೊಳಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದರಲ್ಲೂ ಸಿಡಿ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ.
 
ಡಿಕೆ ಶಿವಕುಮಾರ್ ಮೇಲೆ ಪೈಪೋಟಿಗೆ ಬಿದ್ದು ಅವರ ಮನೆ ಹಿಂಭಾಗದಲ್ಲೇ ಸದಾಶಿವನಗರದಲ್ಲಿ ಬಂಗಲೆಯನ್ನು ಜಾರಕಿಹೊಳಿ ಖರೀದಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ