ಬೆಂಗಳೂರು: ಇದುವರೆಗೆ ಅನುಕಂಪದ ಆಧಾರದ ಮೇಲೆ ಸಿಬ್ಬಂದಿ ಸೇರಿದಂತೆ ಕೆಲ ನೌಕರರಿಗೆ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಹತೆಯ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಆದ್ರೇ.. ಶಿಕ್ಷಣ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಗೊಳ್ಳುವ ಸಾಕಷ್ಟು ನೌಕರರಿಗೆ ಆಡಳಿತದ ಅನುಭವ, ಗಣಕಯಂತ್ರದ ಜ್ಞಾನ, ಭಾಷಾ ಪರಿಣತಿಯ ಕೊರತೆ ಎದ್ದು ಕಾಣುತ್ತಿದೆ, ಸಮಸ್ಯೆ ಉಂಟಾಗುತ್ತಿರೋದ್ರಿಂದ, ಇನ್ಮುಂದೆ ಶಿಕ್ಷಣ ಇಲಾಖೆ ಸಿ ದರ್ಜೆ ನೌಕರರಿಗೆ ಪರೀಕ್ಷೆ ನಿಗದಿಯಾಗಿದೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ, ಶಿಕ್ಷಣ ಇಲಾಖೆಯಲ್ಲಿನ ಅನುಕಂಪದ ಆಧಾರದಲ್ಲಿ ನೇಮಕಗೊಂಡಿರುವ ಹಾಗೂ ನಿಕೃಷ್ಟ ಕಾರ್ಯ ನಿರ್ವಹಣೆಯ ಸಿ ದರ್ಜೆ ನೌಕರರಿಗೆ 100 ಅಂಕಗಳ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಕಾಯಂ ಪೂರ್ವ ಸೇವಾವಧಿ ಘೋಷಣೆಗೆ ಮುನ್ನ ಈ ಪರೀಕ್ಷೆ ಕಡ್ಡಾಯವಾಗಿ ತೇರ್ಗಡೆಯಾಗಬೇಕು ಎಂದು.
ಅಂದಹಾಗೇ ಈ ಪರೀಕ್ಷೆಯನ್ನು ಕಡತಗಳಲ್ಲಿ ವಿಷಯಕ್ಕೆ ನಿಯಮಾವಳಿಗಳನ್ನು ಹಾಕದೇ ಮಂಡಿಸ್ತಾ ಇರೋದು, ನಮೂದಿಸಿದ ಟಿಪ್ಪಣಿ ಸರಿಯಾಗಿ ಇರೋದು, ಕಂಪ್ಯೂಟರ್ ಜ್ಞಾನದ ಕೊರತೆ ಸರಿ ಪಡಿಸೋದಕ್ಕಾಗಿಯೇ ಆಗಿದೆ.