ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು, ಮಾಜಿ ಸ್ಪೀಕರ್, ಹಿರಿಯ ರಾಜಕಾರಣಿ ರಮೇಶ್ ಕುಮಾರ್ ಅವರು ಗುರುವಾರ ಸದನದಲ್ಲಿ ಮಾತನಾಡುತ್ತಾ, ಮಹಿಳೆಯರ ಬಗ್ಗೆ ಆಡಿದ ಮಾತು ಪ್ರಸ್ತಾಪಿಸುವುದಕ್ಲೆ ಅಸಹ್ಯವಾಗಿದೆ. ಈ ರೀತಿಯ ಮಾತನ್ನು ಒಬ್ಬ ಹಿರಿಯ ರಾಜಕಾರಣಿಯ ಬಾಯಿಯಿಂದ ನಾವು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ರಮೇಶ್ ಕುಮಾರ್ ಅವರ ಈ ಹೇಳಿಕೆಯನ್ನು ಕೊಡಗು ಜಿಲ್ಲಾ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಮಹಿಳೆಯರ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದನ್ನು ಪಕ್ಷಾತೀತರಾಗಿ ಎಲ್ಲಾ ಮಹಿಳೆಯರು ಖಂಡಿಸಬೇಕೆಂದು ಮನವಿ ಮಾಡಿರುವ ಅನಿತಾ ಪೂವಯ್ಯ, ಅಕಸ್ಮಾತ್ ರಮೇಶ್ ಕುಮಾರ್ ಅವರು ಕ್ಷಮೆ ಕೇಳಿದರೂ, ಮಹಿಳೆಯರ ಬಗ್ಗೆ ಅವರಿಗಿರುವ ಮನಸ್ಥಿತಿ ಬದಲಾಗಬೇಕೆಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.