ರಮೇಶ್ ಕುಮಾರ್ V/S ಕೆ.ಹೆಚ್.ಮುನಿಯಪ್ಪ ಜಟಾಪಟಿ

ಮಂಗಳವಾರ, 3 ಸೆಪ್ಟಂಬರ್ 2019 (17:52 IST)
ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಕದಡಿದ ನೀರಂತಾಗಿದೆ. ಕಳೆದ ಲೋಕಸಭಾ ಎಲೆಕ್ಷನ್ನಲ್ಲಿ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಭವ ಆದ ನಂತ್ರ ನಾಯಕರ ಮಧ್ಯೆ ವೈಮನಸ್ಸು ಮತ್ತಷ್ಟು ಹೆಚ್ಚಾಗಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ಕಾಂಗ್ರೆಸ್ ಶಾಸಕರು ಹಾಗೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವ್ರ ಹಿಂಬಾಲಕರ ಮಧ್ಯೆ ಆರೋಪ-ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿವೆ.

ಕಾಂಗ್ರೆಸ್ ಹಿರಿಯ ನಾಯಕರೆನಿಸಿದ್ದ ಕೆ.ಎಚ್.ಮುನಿಯಪ್ಪ 2019 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎದುರು ಪರಾಭವಗೊಂಡ್ರು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಎಂಎಲ್ಸಿ ನಜೀರ್ ಅಹಮದ್ ಅವ್ರುಗಳು ಬಿಜೆಪಿಗೆ ಬೆಂಬಲ ಕೊಟ್ಟಿದ್ರಿಂದ ಕಾಂಗ್ರೆಸ್ ಸೋಲುವಂತಾಯ್ತು ಅನ್ನೋದು ಕೆ.ಎಚ್.ಮುನಿಯಪ್ಪ ಅವ್ರ ಆರೋಪವಾಗಿದೆ. ಕಾಂಗ್ರೆಸ್ ವಿರೋಧಿಗಳನ್ನು ಪಕ್ಷದಿಂದ ಉಚ್ಛಾಟಿಸಬೇಕು ಅಂತ ಹೈಕಮಾಂಡ್ ಎದುರು ಕೆ.ಎಚ್.ಮುನಿಯಪ್ಪ ಒತ್ತಾಯಿಸಿದ್ರು.

ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವ್ರ ಆರೋಪಕ್ಕೆ ಬಂಗಾರಪೇಟೆಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ನನ್ನ ರಾಜಕೀಯ ಗುರುಗಳಾಗಿರುವ ಕೆ.ಎಚ್.ಮುನಿಯಪ್ಪ ಅವ್ರು ಪಕ್ಷಕ್ಕೆ ನಿಷ್ಠರಾಗಿದ್ದು, ಅವ್ರ ಹಾದಿಯಲ್ಲೇ ನಾನು ನಡೀತಿದ್ದೇನೆ ಅಂತ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕುಟುಕಿದ್ದಾರೆ.

ದಿನಕಳೆದಂತೆ ಬಹಿರಂಗವಾಗ್ತಿರುವ ಕೋಲಾರ ಜಿಲ್ಲೆಯ ಕಾಂಗ್ರೆಸ್ ನಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳು ಮುಖಂಡರ ಮಧ್ಯೆ ಮತ್ತಷ್ಟು ದೊಡ್ಡ ಮಟ್ಟದ ಬಿರುಕು ಮೂಡಿಸುವುದಕ್ಕೆ ಕಾರಣವಾಗ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ