ಪ್ರಧಾನಿ ವಿರುದ್ಧ ಟ್ವೀಟ್ ಮಾಡಿದ್ದು ರಮ್ಯಾಗೇ ಮುಳುವಾಯ್ತು!
ಈ ಟ್ವೀಟ್ ಈಗ ರಮ್ಯಾಗೆ ತಿರುಗುಬಾಣವಾಗಿದೆ. ದೇಶದ ಪ್ರಧಾನಿ ವಿರುದ್ದ ಇಷ್ಟು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಈ ಮೂಲಕ ರಮ್ಯಾ ದೇಶದ ಜತೆಗೇ ಅವಮಾನ ಮಾಡಿದ್ದಾರೆ. ರಮ್ಯಾ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಇದೇ ರೀತಿ ಅಭಿಪ್ರಾಯ ಬರುತ್ತಿದೆ.