ಮಗಳೊಂದಿಗೆ ಸಂಪರ್ಕವೇ ಇಲ್ಲ ಎಂದಿದ್ದ ಡಿಜಿಪಿ ರಾಮಚಂದ್ರರಾವ್: ರನ್ಯಾ ರಾವ್ ಮೊದಲು ಕರೆ ಮಾಡಲು ಹೇಳಿದ್ದೇ ತಂದೆಗೆ

Krishnaveni K

ಶನಿವಾರ, 15 ಮಾರ್ಚ್ 2025 (12:57 IST)
ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ನಟಿ ರನ್ಯಾ ರಾವ್ ಬಂಧಿತರಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಬಯಲಾಗುತ್ತಿದೆ. ರನ್ಯಾ ಬಂಧನವಾದಾಗ ನನಗೆ ಮಗಳ ಜೊತೆ ಸಂಪರ್ಕವೇ ಇರಲಿಲ್ಲ ಎಂದು ರನ್ಯಾ ತಂದೆ ಡಿಜಿಪಿ ರಾಮಚಂದ್ರ ರಾವ್ ಹೇಳಿದ್ದರು. ಆದರೆ ಬಂಧನದ ಬಳಿಕ ರನ್ಯಾ ಮೊದಲು ಕರೆ ಮಾಡಲು ಹೇಳಿದ್ದೇ ತಂದೆಗೆ ಎನ್ನಲಾಗಿದೆ.

ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ರನ್ಯಾ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಈಗ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ರನ್ಯಾ ಬಂಧನವಾಗುತ್ತಿದ್ದಂತೇ ಎಲ್ಲರೂ ಇದಕ್ಕೆಲ್ಲಾ ತಂದೆಯ ಸಹಾಯವಿದ್ದಿರಬಹುದು ಎಂದು ಆರೋಪಿಸಿದ್ದರು.

ಇದರ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಡಿಜಿಪಿ ರಾಮಚಂದ್ರರಾವ್, ಮದುವೆ ಬಳಿಕ ಮಗಳು ನಮ್ಮ ಜೊತೆ ಸಂಪರ್ಕದಲ್ಲಿಲ್ಲ. ಅವಳ ಕೆಲಸ ನನಗೆ ಗೊತ್ತೇ ಇಲ್ಲ ಎಂದು ಭಾವನಾತ್ಮಕವಾಗಿ ಪತ್ರ ಬರೆದಿದ್ದರು.

ಆದರೆ ಈಗ ಕೆಲವು ಮೂಲಗಳ ಪ್ರಕಾರ ರನ್ಯಾ ಬಂಧನದ ಬಳಿಕ ತಮ್ಮ ಪರಿಚಯದ ಬಸವರಾಜ್ ಎಂಬವರಿಗೆ ಕರೆ ಮಾಡಿ ತಂದೆಗೆ ಮತ್ತು ಅಂಕಲ್ ಗೆ ಕರೆ ಮಾಡಿ ವಿಷಯ ಹೇಳಲು ತಿಳಿಸಿದ್ದರು ಎಂದು ವಿಚಾರ ಬಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ