ಒಬ್ಬಳು ಹುಡುಗಿ ಮೇಲೆ 6 ಜನರಿಂದ ಸಾಮೂಹಿಕ ಅತ್ಯಾಚಾರ : ವಿಡಿಯೋ ರೆಕಾರ್ಡ್

ಗುರುವಾರ, 23 ಏಪ್ರಿಲ್ 2020 (14:47 IST)
ಲಾಕ್ ಡೌನ್ ನಡುವೆ 13 ವರ್ಷದ ಬಾಲಕಿ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ವರದಿಯಾಗಿದೆ.

ಬಾಲಕಿ ಮಧ್ಯಾಹ್ನ 2 ಗಂಟೆ ವೇಳೆಗೆ ಮೂತ್ರ ವಿಸರ್ಜನೆಗೆ ಅಂತ ಹೊರಗೆ ಹೋಗಿದ್ದಾಳೆ. ಆಗ ಪಕ್ಕದ ಮನೆಯಲ್ಲಿದ್ದ ಇಬ್ಬರು ಹುಡುಗರು ಕಟ್ಟಡವೊಂದರಲ್ಲಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.

ಆ ಬಳಿಕ ಈ ಇಬ್ಬರು ಹುಡುಗರ, ನಾಲ್ವರು ಗೆಳೆಯರೂ ಹುಡುಗಿ ಮೇಲೆ ಅತ್ಯಾಚಾರ ನಡೆಸಿದ್ದು, ಅತ್ಯಾಚಾರದ ವೇಳೆ ವಿಡಿಯೋ ರಿಕಾರ್ಡಿಂಗ್ ಮಾಡಿಕೊಂಡಿದ್ದಾರೆ.

ಬಾಲಕಿ ನಡೆದ ವಿಷಯ ಪೋಷಕರಿಗೆ ತಿಳಿಸಿದ್ದು, ಪಾಲಕರು ಕೇಸ್ ನೀಡಿದನ್ವಯ 6 ಆರೋಪಿಗಳನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧನ ಮಾಡಿದ್ದಾರೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ