ಹೆಣ್ಣು ಹುಟ್ಟಿತು ಎಂದು ಒಲೆಯಲ್ಲಿ ಕೂಸು ಸುಟ್ಟು ಪಾಪಿ ತಾಯಿ

ಗುರುವಾರ, 26 ಮಾರ್ಚ್ 2020 (18:51 IST)
ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು. ಆದರೆ ಕೆಟ್ಟ ತಾಯಿ ಇರಲಾರಳು ಅನ್ನೋದು ನಾಣ್ಣುಡಿ. ಆದರೆ ಇಲ್ಲೊಬ್ಬ ಪಾಪಿ ತಾಯಿ ತನ್ನ ಹಸುಗೂಸನ್ನೇ ಸುಟ್ಟು ವಿಕೃತಿ ಮೆರೆದಿದ್ದಾಳೆ.

ಹೆಣ್ಣು ಮಗು ಹುಟ್ಟಿತು ಅಂತ ಹಸುಗೂಸನ್ನು ಒಲೆಯಲ್ಲಿ ಪಾಪಿ ತಾಯಿಯೇ ಹಾಕಿ ಸುಟ್ಟಿರುವ ಅಮಾನವೀಯ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಕಡೂರು ತಾಲೂಕಿನ ನಾಯಕನಹಟ್ಟಿಯಲ್ಲಿ ಪಾಪಿ ತಾಯಿಯೊಬ್ಬಳು ವಿಕೃತಿ ಮೆರೆದಿದ್ದಾಳೆ.

ಹಸುಗೂಸನ್ನು ಸುಟ್ಟು ಕೊಲೆ ಮಾಡಿರೋ ಪಾಪಿ ತಾಯಿ ಸಂಗೀತಾಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಅಲ್ಲದೇ ಆರೋಪಿ ಮಹಿಳೆಯ ಕುಟುಂಬದ ಮೂವರನ್ನು ಬಂಧನ ಮಾಡಲಾಗಿದೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ