ಉದ್ಯಮಿಯಿಂದ ಯುವತಿಯ ಅತ್ಯಾಚಾರ
ಉದ್ಯಮಿಯೊಬ್ಬ ಬಿಸಿನೆಸ್ ವಿಚಾರ ಮಾತನಾಡಲು ಟೆಕ್ಕಿಯನ್ನ ಕರೆಸಿಕೊಂಡಿದ್ದ ಅಷ್ಟೇ ಅಲ್ಲದೆ ಖಾಸಗಿ ಹೊಟೇಲ್ ನಲ್ಲಿ ಯುವಯ ಜೊತೆ ಉಳಿದುಕೊಂಡಿದ್ದ.ಮೂಲತಃ ತಮಿಳುನಾಡಿನ ಉದ್ಯಮಿ ರಮೇಶ್ ಆಗಸ್ಟ್ 6 ರಂದು ಬಿಸಿನೆಸ್ ವಿಚಾರವಾಗಿ ನಗರಕ್ಕೆ ಬಂದಿದ್ದ .ಈ ವೇಳೆ ಯುವತಿಯನ್ನ ಭೇಟಿಮಾಡಲೆಂದು ಉದ್ಯಮಿ ಕಬ್ಬನ್ ಪಾರ್ಕ್ ಗೆ ಕರೆಸಿಕೊಂಡಿದ್ದ.ಸ್ವಲ್ಪ ಸಮಯದ ಕಾಲ ಕಬ್ಬನ್ ಪಾರ್ಕ್ ನಲ್ಲಿ ಮಾತನಾಡಿ ಊಟಕ್ಕೆ ಅಂತ ಹೋಟೆಲ್ ಗೆ ಉದ್ಯಮಿ ಕರೆದುಕೊಂಡು ಹೋಗಿದ್ದಾನೆ.ನಂತರ ಹೋಟೆಲ್ ನಲ್ಲಿ ಉದ್ಯಮಿ ಯುವತಿಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ.ಅತ್ಯಾಚಾರಕ್ಕೊಳಗಾದ ಯುವತಿಗೆ ರಮೇಶ್ ದೂರದ ಸಂಬಂಧಿ. ಇನ್ನು ಘಟನೆಯಿಂದ ಶಾಕ್ ಗೆ ಒಳಗಾಗಿದ್ದ ಯುವತಿ ಮೂರು ದಿನದ ಬಳಿಕ ದೂರು ನೀಡಿದ್ದಾಳೆ.ಕಬ್ಬನ್ ಪಾರ್ಕ್ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.ಈಗಾಗಲೇ ನಮ್ಮ ಒಂದು ತಂಡ ತಮಿಳು ನಾಡಿಗೆ ಭೇಟಿ ನೀಡಿದೆ.ದೂರಿನನ್ವಯ ಎಫ್ ಐ ಆರ್ ದಾಖಲಿಸಿದ್ದೇವೆ.ಆರೋಪಿಯನ್ನ ಬಂದಿಸಿದ ನಂತರ ಮತ್ತಷ್ಟು ಮಾಹಿತಿ ಕಲೆ ಹಾಕುತ್ತೇವೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದಾರೆ.