ಕೇಂದ್ರಕ್ಕೆ ಶಿಕ್ಷಣ ನೀತಿ ಶೀಘ್ರ ಸಲ್ಲಿಕೆ

ಬುಧವಾರ, 17 ಅಕ್ಟೋಬರ್ 2018 (19:24 IST)
ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ನೀಡುವಂತಹ ಹಾಗೂ ಶೈಕ್ಷಣಿಕವಾದಂತಹ ಪಠ್ಯಕ್ರಮ ಭಾರ ತಗ್ಗಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ ನೂತನ ಶಿಕ್ಷಣ ನೀತಿ ಕರಡನ್ನು ಕೇಂದ್ರಕ್ಕೆ ಶೀಘ್ರ ಸಲ್ಲಿಕೆಯಾಗಲಿದೆ.

ಶಾಲಾ ಪಠ್ಯಕ್ರಮವನ್ನು ಸಮಗ್ರವಾಗಿ ಬದಲಾಯಿಸುವ ದೃಷ್ಟಿಯಿಂದ ಸಿದ್ಧಪಡಿಸಲಾಗಿರುವ ನೂತನ ಶಿಕ್ಷಣ ನೀತಿ ಕರಡನ್ನು ಸಮಿತಿಯ ಸದಸ್ಯರು ಈ ತಿಂಗಳ ಅಂತ್ಯಕ್ಕೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಿದ್ದಾರೆ.

ಕರಡು ಸಿದ್ಧಪಡಿಸಲು ಸಮಿತಿ ಸದಸ್ಯರಿಗೆ ನೀಡಲಾಗಿದ್ದ ಅವಧಿಯನ್ನು ನಾಲ್ಕು ಬಾರಿ ವಿಸ್ತರಣೆ ಮಾಡಲಾಗಿತ್ತು. ಅಂತಿಮವಾಗಿ ಕರಡು ಸಿದ್ಧಗೊಂಡಿದೆ. ಭಾರತೀಯ ಭಾಷೆಗಳಿಗೆ ಉತ್ತೇಜನ ಹಾಗೂ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರಡು ರಚನೆ ಮಾಡಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ