ಪಾಕಿಸ್ತಾನಕ್ಕೆ ಬಿಸಿ, ಚಳಿ ಮುಟ್ಟಿಸ್ತಿರೋ ಹಾಲಿನ ರೇಟ್

ಬುಧವಾರ, 11 ಸೆಪ್ಟಂಬರ್ 2019 (14:39 IST)
ಪಾಕಿಸ್ತಾನದಲ್ಲಿ ಇದೀಗ ಪೆಟ್ರೋಲ್, ಡೀಸೆಲ್ ಬೆಲೆಗಿಂತಲೂ ಹಾಲಿನ ರೇಟ್ ಕಾಸ್ಟ್ಲಿ ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆಗಿಂತಲೂ ಹಾಲಿನ ರೇಟ್ ಅಧಿಕಗೊಂಡಿದೆ. ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಗೆ 112 ರೂ. ಹಾಗೂ 90 ರೂ. ಇದ್ದರೆ, ಹಾಲು ಸಿಗ್ತಿರೋದು ಲೀಟರ್ ಗೆ 125 ರಿಂದ 150 ರೂ.ಗಳಿಗೆ.

ಕರಾಚಿ, ಸಿಂಧ್ ಪ್ರದೇಶಗಳಲ್ಲಿ ಪೆಟ್ರೋಲ್ ಗಿಂತ ಹಾಲು ಅಧಿಕ ರೇಟಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಹಾಲು ಮಾರ್ಕೆಟ್ ಗೆ ಬರದ ಹಿನ್ನೆಲೆಯಲ್ಲಿ ಈ  ರೇಟ್ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.

ಮೋಹರಂ ಹಬ್ಬದ ಅಂಗವಾಗಿಯೂ ಹಾಲಿನ ಬೇಡಿಕೆ ಹೆಚ್ಚಿತ್ತು. ಸಹಜವಾಗಿಯೇ ಹಾಲು ಬೆಲೆ ಏರಿಕೆ ಕಂಡಿರೋದು ಜನರಿಗೆ ಶಾಕ್ ನೀಡುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ