ಹೂಡಿಕೆದಾರರನ್ನು ಆಕರ್ಷಿಸಲು ಬೆಲ್ಲಿ ಡ್ಯಾನ್ಸರ್ಸ್ ಗಳ ಪ್ರದರ್ಶನ ಆಯೋಜಿಸಿದ ಪಾಕ್

ಮಂಗಳವಾರ, 10 ಸೆಪ್ಟಂಬರ್ 2019 (09:26 IST)
ಪಾಕಿಸ್ತಾನ : ಪಾಕಿಸ್ತಾನ ಹೂಡಿಕೆದಾರರನ್ನು ಆಕರ್ಷಿಸಲು ಬೆಲ್ಲಿ ಡ್ಯಾನ್ಸರ್ ಕಾರ್ಯಕ್ರಮ ಆಯೋಜಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮುಜುಗರಕ್ಕೀಡಾಗಿದೆ.ಈಗಾಗಲೇ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನ ಹೂಡಿಕೆದಾರರ ಸಮಾವೇಶವನ್ನು ಪಾಕಿಸ್ತಾನ ಅಝೇಬಾಯಿಜಾನ್ ನಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೂಡಿಕೆದಾರರನ್ನು ಆಕರ್ಷಿಸಲು ಬಾಕು ಮತ್ತು ಬೆಲ್ಲಿ ಡ್ಯಾನ್ಸರ್ಸ್ ಗಳ ಭರ್ಜರಿ ಪ್ರದರ್ಶನ ಆಯೋಜಸಿದೆ.

 

ಇದರ ವಿಡಿಯೋ ತುಣಕನ್ನು ಪಾಕಿಸ್ತಾನದ ಪತ್ರಕರ್ತೆ ಗುಲ್ ಭಾಖ್ರಿ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಈಗ ವೈರಲ್ ಆಗಿದ್ದು, ಇದು ನವ ಪಾಕಿಸ್ತಾನದ ಹಾದಿ ಎಂದು ನೆಟ್ಟಿಗರು ಟೀಕಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ