ಗೌರಿ ಹಂತಕರನ್ನ ಬಂಧಿಸಿ, ವಿಶ್ವಾಸ ಉಳಿಸಿಕೊಳ್ಳಿ: ಪ್ರತಿರೋಧ ಸಮಾವೇಶದಲ್ಲಿ ವಿಚಾರವಾದಿಗಳ ಆಗ್ರಹ
ಮಂಗಳವಾರ, 12 ಸೆಪ್ಟಂಬರ್ 2017 (16:18 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಪ್ರಗತಿಪರರು, ವಿಚಾರವಾದಿಗಳು ಬೃಹತ್ ಪ್ರತಿರೋಧ ಸಮಾವೇಶ ನಡೆಸುತ್ತಿದ್ದಾರೆ. ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ಗೌರಿ ಹಂತಕರ ಬಂಧನಕ್ಕೆ ಒಕ್ಕೊಲರ ಆಗ್ರಹ ಕೇಳಿ ಬರುತ್ತಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರಧಾನಮಂತ್ರಿ ನರೇಂದ್ರಮೋದಿ ಯಾಕೆ ಮೌನವಹಿಸಿದ್ದಾರೆ..? ಎಂದು ಪರಿಸರವಾದಿ ಮೇಧಾ ಪಾಟ್ಕರ್ ಪ್ರಶ್ನಿಸಿದ್ದಾರೆ. ಪ್ರಕರಣವನ್ನ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಒಪ್ಪಿಸಿದೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು, ಹಂತಕರ ಬಂಧನವಾಗಬೇಕು. ಹಂತಕರನ್ನ ಬಂಧಿಸುವ ಮೂಲಕ ವಿಶ್ವಾಸ ುಳಿಸಿಕೊಳ್ಳಿ ಎಂದು ಸರ್ಕಾರಕ್ಕೆ ಮೇಧಾ ಪಾಟ್ಕರ್ ಒತ್ತಾಯಿಸಿದ್ದಾರೆ.
ಬೃಹತ್ ಸಮಾವೇಶದಲ್ಲಿ ರಾಜ್ಯ ಮತ್ತು ದೇಶದ ವಿವಿಧೆಡೆಯಿಂದ ಆಗಮಿಸಿರುವ ವಿಚಾರವಾದಿಗಳು, ಸಾಹಿತಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಸಿಪಿಐ ಮುಖಂಡ ಸೀತಾರಾಮ್ ಯೆಚೂರಿ, ಸ್ವಾಮಿ ಅಗ್ನಿವೇಶ್, ಗಿರೀಶ್ ಕಾರ್ನಾಡ್, ಕವಿತಾ ಲಂಕೇಶ್, ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರೆ, ಎಂ.ಎಂ. ಕಲ್ಬುರ್ಗಿ, ಗೌರಿಲಂಕೇಶ್ ಸೇರಿದಂತೆ ವಿಚಾವಾದಿಗಳ ಹತ್ಯೆ ಬಗ್ಗೆ ವಿಶ್ವಸಂಸ್ಥೆಗೆ ದೂರು ನೀಡಲು ನಿರ್ಧರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ