ಮೈದುನನ ಜತೆ ಗುಟ್ಟಾಗಿದ್ದ ಸಂಬಂಧ ವಾಟ್ಸಾಪ್‌ನಿಂದ ರಟ್ಟು, ಮನನೊಂದು ಮಹಿಳೆ ಆತ್ಮಹತ್ಯೆ

Sampriya

ಭಾನುವಾರ, 8 ಡಿಸೆಂಬರ್ 2024 (17:38 IST)
ಬೆಳಗಾವಿ: ಮೈದುನ ಜತೆಗಿದ್ದ ಗುಪ್ತ ಸಂಬಂಧ ಬಹಿರಂಗವಾಗುತ್ತಿದ್ದ ಹಾಗೇ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ  28 ವರ್ಷದ ಆರತಿ ಎಂದು ಗುರುತಿಸಲಾಗಿದೆ.

ಈಕೆಯನ್ನು ಏಳು ವರ್ಷದ ಹಿಂದೆ ಮೊರಬ ಗ್ರಾಮದ ಪ್ರಶಾಂತ್ ಕಾಂಬಳೆ ಜೊತೆಗೆ ಮದುವೆ ಮಾಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಈಚೆಗೆ ಪತಿಯ ಸಹೋದರ ಜತೆಗೆ ಆರತಿಗೆ ಸಂಬಂಧ ಬೆಳೆದಿದೆ. ಈ ವೇಳೆ ಇಬ್ಬರು ಒಟ್ಟಿಗೆ ಪೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಮೈದುನ, ಎಡಿಟ್ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಗೂ ಇನ್‌ಸ್ಟಾಗ್ರಾಂಲ್ಲಿ ಸ್ಟೋರಿ ಹಾಕಿಕೊಂಡಿದ್ದಾನೆ. ಈ ವಿಚಾರ
ಆರತಿಯ ಪತಿ ಪ್ರಶಾಂತ್‌ಗೆ ತಿಳಿದು, ಜಗಳವಾಡಿದ್ದಾನೆ. ಹಿರಿಯರ ಸಮ್ಮುಖದಲ್ಲಿ ಆಕೆಗೆ ಬುದ್ಧಿವಾದ ಹೇಳಿ, ಆಕೆಯನ್ನು ಅಕ್ಕನ ಮನೆಗೆ ಕಳುಹಿಸಿದ್ದರು.

ಗುಪ್ತವಾಗಿದ್ದ ಸಂಬಂಧ ಬಹಿರಂಗವಾಯಿತೆಂದು ಆರತಿ ಅಕ್ಕನ ಮನೆಗೆ ಬಂದಾಗ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈಕೆಯ ಸಾವಿಗೆ ಅವಿವಾಹಿತ ಸಾಗರ್ ಹಾಗೂ ಆತನ ಕುಟುಂಬಸ್ಥರು ಕಾರಣ ಎಂದು ಮಹಿಳೆಯ ಪೋಷಕರು ಆರು ಜನರ ವಿರುದ್ದ ರಾಯಬಾಗ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತ ಆರತಿ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆಯೇ ಸಾಗರ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ