ಮಧ್ಯಪ್ರದೇಶ: ಮದುವೆಯಾದ ಎರಡೇ ದಿನಕ್ಕೆ ಯುವತಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಧಮ್ನೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ನಂತರ ವರನ ಕುಟುಂಬ ಶಾಕ್ ಆಗಿದೆ.
ಧಮನೋಡ್ ಪೋಲೀಸರ ಪ್ರಕಾರ, ಯುವತಿ ಮೇ 20 ರಂದು ಮದುವೆಯಾಗಿದ್ದು, ಕೇವಲ ಎರಡು ದಿನಗಳ ಬಳಿಕ, ಮೇ 22 ರ ಮುಂಜಾನೆ ಯುವತಿ ಹೊಟ್ಟೆ ನೋವಿನಿಂದ ಬಳಲಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ತುಂಬು ಗರ್ಭಿಣಿ ಎಂದು ವೈದ್ಯರು ಹೇಳಿದ್ದಾರೆ.
ಯುವತಿಯನ್ನು ಬಾಯಿ ಬಿಡಿಸಿದಾಗ ತಿಂಗಳುಗಟ್ಟಲೆ ಮುಚ್ಚಿಟ್ಟಿದ್ದ ಅತ್ಯಾಚಾರ ಮತ್ತು ವಂಚನೆ ಬಗ್ಗೆ ಬಾಯಿ ಬಿಟ್ಟಿದ್ದಾಳೆ.
ಎರಡು ವರ್ಷಗಳ ಹಿಂದೆ ಸಿಮ್ರಾಲಿ ಗ್ರಾಮದ ಮದುವೆಯೊಂದರಲ್ಲಿ ಸುನೀಲ್‌ನನ್ನು ಭೇಟಿಯಾಗಿದ್ದ ಆಕೆ ಮದುವೆಯ ಭರವಸೆ ನೀಡಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಆದರೆ ಬೆದರಿಕೆ ಮತ್ತು ಸಾಮಾಜಿಕ ಕಳಂಕಕ್ಕೆ ಹೆದರಿ ಯುವತಿ ಈ ಘಟನೆಯನ್ನು ತನ್ನ ಕುಟುಂಬದಿಂದ ಗೌಪ್ಯವಾಗಿಟ್ಟಿದ್ದಳು.
ಸುನೀಲ್‌ಗೆ ಪದೇ ಪದೇ ಈ ವಿಚಾರ ತಿಳಿಸಿದರು ಆತ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಅದಲ್ಲದೆ ಆತನಿಗೆ ಮದುವೆಯಾಗಿರುವುದಾಗಿ ಹೇಳಿದ್ದಾನೆ. ಇದೀಗ ಸುನೀಲ್ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.