ನಾನು ಬೆಳಗ್ಗೆ ಟಿವಿ ನೋಡ್ತಿದ್ದೆ.ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಸಭೆಯಲ್ಲಿ ಹೊರಗೆ ಬಂದು ಯತೀದ್ರ ಅವರು ಅವರ ತಂದೆಗೆ ಫೋನ್ ಮಾಡ್ತಾರೆ.ಅಪ್ಪ ನಾನು ಹೇಳಿದ ನಾಲ್ಕೈದು ಹೆಸರು ಮಾತ್ರ ಮಾಡಿ.ಉಳಿದದ್ದು ಮಾಡಬೇಡಿ ಅಂತ.ಮಹದೇವ್ ನಾನು ಹೇಳಿದ ನಾಲ್ಕು ಮಾತ್ರ ಮಾಡಿ, ಅದನ್ನ ಬಿಟ್ಟು ಮಾಡಬೇಡಿ ಅಂತ.ಅಂದ್ರೆ ಯಾವುದು ಡೀಲ್ ಆಗಿದೆ ಅದನ್ನ ಮಾತ್ರ ಮಾಡಿ.ಡೀಲ್ ಆಗದಿರೋದು ಬೇಡ ಅಂತ ತಂದೆ ಸಿದ್ದರಾಮಯ್ಯಗೆ ಯತಿಂದ್ರ ಹೇಳಿದ್ದಾರೆ.
ಈ ಸರ್ಕಾರ ಬಂದ ಮೇಲೆ ಯಾರನ್ನಾದ್ರೂ ಕೇಳಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿದೆ.ನಮ್ಮಬಿಜೆಪಿ ಮೇಲೆ 40% ಸರ್ಕಾರ ಅಂತ ಆರೋಪ ಮಾಡಿದ್ರು.ಯಾವುದನ್ನೂ ಸಾಭೀತು ಮಾಡಲು ಆಗಲಿಲ್ಲ.ಇವರದ್ದು 60%, 80% ಎಷ್ಟು ಪರ್ಸೆಂಟ್ ಸರ್ಕಾರ ಅಂತ ಸ್ಪಷ್ಟಪಡಿಸಬೇಕು.ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ವಿಧಾನ ಪರಿಷತ್ ನಾಯಕ ರವಿಕುಮಾರ್ ಆಗ್ರಹಿಸಿದ್ದಾರೆ.