ಒಂದು ಕಾಲದಲ್ಲಿ ಆರ್ ಟಿ ಇ ಸೀಟ್ ಸಿಗುವುದೇ ಭಾಗ್ಯ ಅಂತಿದ್ರು. ಆರ್ ಟಿ ಇ ಸೀಟ್ ಸಿಕ್ರೆ ಸಾಕಪ್ಪ ಅಂತಾ ಪೋಷಕರು ಕ್ಯೂ ನಲ್ಲಿ ನಿಂತು ಕಾಯ್ತಿದ್ರು. ಆದ್ರೆ ಈಗ ಆರ್ ಟಿ ಇ ಸೀಟ್ ಸಿಕ್ರು ಮಕ್ಕಳನ್ನ ಅಡ್ಮೀಷನ್ ಮಾಡಿಸುವುದಕ್ಕೆ ಪೋಷಕರು ಮೀನಾಮೇಷ ಏಣಿಸುತ್ತಿದ್ದಾರೆ. ಆರ್ ಟಿ ಇ ಅಡಿಯಲ್ಲಿ ತಮ್ಮ ಮಕ್ಕಳನ್ನ ಶಾಲೆಗೆ ಸೇರಿಸಲು ಹಿಂದೇಟುಹಾಕ್ತಿದ್ದಾರೆ.
ಆರ್ ಟಿ ಇ ಅಡಿಯಲ್ಲಿ ಮಕ್ಕಳಿಗೆ ಸೀಟ್ ಸಿಕ್ರೆ ಮಕ್ಕಳ ಸಂಪೂರ್ಣ ಖರ್ಚನ್ನ ಸರ್ಕಾರ ಭರಿಸುತ್ತೆ ಅಂತಾ ಎಷ್ಟೋ ಪೋಷಕರು ಆಡ್ಮೀಷನ್ ಮಾಡಬೇಕೆಂದುಕೊಂಡಿರುತ್ತಾರೆ. ಆದ್ರೆ ಈಗ ಆರ್ ಟಿ ಇ ಅಡಿಯಲ್ಲಿ ಮಕ್ಕಳಿಗೆ ಸೀಟ್ ಸಿಕ್ರು ಪೋಷಕರು ಆಡ್ಮೀಷನ್ ಮಾಡಿಸಲ್ಲ ಅಂತಾ ಹಿಂದೇಟು ಹಾಕ್ತಿದ್ದಾರೆ. ಅಂದಹಾಗೆ ಸರ್ಕಾರ ಅನುದಾನಿತ ಶಾಲೆಗಳನ್ನ ಆರ್ ಟಿ ಇ ವ್ಯಾಪ್ತಿಗೆ ತಂದನಂತರ ಸೀಟುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಪೋಷಕರು ಮನೆ ಹತ್ತಿರದಲ್ಲಿಯೇ ಮಕ್ಕಳನ್ನ ಶಾಲೆಗೆ ಸೇರಿಸಬೇಕೆಂದು ನಿರ್ಧಾರ ಮಾಡಿರುತ್ತಾರೆ . ಈ ಎರಡು ಕಾರಣಗಳಿಂದ ಪೋಷಕರು ಆರ್ ಟಿ ಇ ಅಡಿಯಲ್ಲಿ ಮಕ್ಕಳನ್ನ ಶಾಲೆಗೆ ಸೇರಿಸಲು ನಿರಾಕರಿಸುತ್ತಿದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಆರ್ ಟಿ ಇ ಅಡಿ ಲಭ್ಯವಿರುವ ಸೀಟುಗಳ ಸಂಖ್ಯೆ ಹೆಚ್ಚಿದ್ರು ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಮಾತ್ರ ಗಣನೀಯವಾಗಿ ಇಳಿಕೆಯಾಗ್ತಿದೆ.
ಪುರಸ್ಕೃತವಾದ ಅರ್ಜಿ 9953
ಪ್ರವೇಶ ಪಡೆದವರು 3844
ಈ ಬಾರಿ ಆರ್ ಟಿ ಇ ಅಡಿಯಲ್ಲಿ ಮಕ್ಕಳನ್ನ ಶಾಲೆಗೆ ಸೇರಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರ್ ಟಿ ಇ ಅಡಿ ಪ್ರವೇಶ ಪಡೆದ ಮಕ್ಕಳ ಶುಲ್ಕ ಸರ್ಕಾರವೇ ಭರಿಸುತ್ತಿತ್ತು. ಆದ್ರೆ ಈಗ ವರ್ಷಗಳು ಕಳೆದಂತೆ ಖಾಸಗಿ ಶಾಲೆಗಳ ಮಕ್ಕಳ ಶುಲ್ಕ ಭರಿಸುವುದೇ ಸರ್ಕಾರಕ್ಕೆ ಹೊರೆಯಾಗಿದೆ. ಹೀಗಾಗಿ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿತ್ತು. ಇದರಿಂದ ಪೋಷಕರಿಗೆ ಬೇಸರವಾಗಿದೆ.ಮಕ್ಕಳಿಗೆ ಸೀಟು ಸಿಕ್ರು ಶಾಲೆಯ ವ್ಯವಸ್ಥೆ ನೋಡಿ ಪೋಷಕರು ಮಕ್ಕಳನ್ನ ಶಾಲೆಗೆ ಕಳಿಸಲ್ಲ ಅಂತಾ ನಿರಾಕರಣೆ ಮಾಡ್ತಿದ್ದಾರೆ. ಹೀಗಾಗಿ ನಗರದ ಖಾಸಗಿ ಶಾಲೆಯಲ್ಲಿ ಆರ್ ಟಿ ಇ ಸೀಟು ಖಾಲಿ ಒಡೆಯುತ್ತಿದೆ.ಸೀಟ್ ಇದ್ರು ಮಕ್ಕಳಿಗೆ ಮಾತ್ರ ಉಪಯೋಗ ಇಲ್ಲದಂತಾಗಿದೆ. ಇದ್ದರಿಂದ ಆ ಕಡೆ ಹಾವು ಸಾಯಬಾರದು ಈ ಕಡೆ ಕೊಲುಮುರಿಬಾರದು ಅನ್ನುವಾಗೆ ಆಗಿದೆ.