ಕೊರೊನಾ ಹೆಮ್ಮಾರಿಯಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ ಜನರು ಇದೀಗ ಸಹಜ ಸ್ಥಿತಿಗೆ ಬಂದಿದಾರೆ. ಆದ್ರು ಅದರಿಂದ ಉಂಟಾಗಿರುವ ದುಷ್ಪರಿಣಾಮ ಮಾತ್ರ ಕಡಿಮೆ ಆಗಿಲ್ಲ. ಕೊರೋನಾ ಮುಗಿದರೂ ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಕರು, ಶಿಕ್ಷಣ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.