ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ರಾಜ್ಯಾದ್ಯಂತ 45 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.
ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಯಿತು. ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಧೀಶ ಜಗದೀಶ, ಜೈಲರ್ ಕೃಷ್ಣಕುಮಾರ ಸಮ್ಮಖದಲ್ಲಿ ಕೈದಿಗಳಾದ ವೆಂಕಟೇಶ್ ಆಂದೋಲಾ, ನರಸಪ್ಪ ಯಲಮೂರ, ಖಲಿಂದರ್ ಮಸ್ಕಿಂರನ್ನ ಬಿಡುಗಡೆ ಮಾಡಲಾಯಿತು.
2012ರಲ್ಲಿ ಸ್ವಂತ ಅಣ್ಣನ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ್ ಜೈಲು ಸೇರಿದ್ದರೆ, 2012ರಲ್ಲಿ ನರಸಪ್ಪ ಮಗನ ಕೊಲೆ ಮಾಡಿ ಜೈಲು ಸೇರಿದ್ದ. ಈ ಇಬ್ಬರು ಕೈದಿಗಳಿಗೆ ಹತ್ತು ವರ್ಷ ಶಿಕ್ಷೆಯಾಗಿದ್ದು, ಈಗಾಗಲೇ ತಲಾ 8 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಮತ್ತೋರ್ವ ಕೈದಿ ಖಲಿಂದರ್ ಎರಡು ವರ್ಷಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಸನ್ನಡತೆ ಆಧಾರದ ಮೇಲೆ ಈಗ ಈ ಮೂವರು ಬಿಡುಗಡೆಗೊಂಡಿದ್ದಾರೆ.