ಬೆಂಗಳೂರು : ಸರ್ಕಾರ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯಿಂದ ಅರ್ಧ ಕರ್ನಾಟಕಕ್ಕೆ ರಿಲೀಫ್ ಸಿಕ್ಕಿದ್ದು, ಸರ್ಕಾರ ಯಾವುದಕ್ಕೆಲ್ಲಾ ರಿಲೀಫ್ ನೀಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಡಿಸಿಗಳ ಜೊತೆ ಚರ್ಚಿಸಿ ಸರ್ಕಾರ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದ್ದು, ರಾಮನಗರ, ಚಾಮರಾಜನಗರ, ಕೋಲಾರ, ಕೊಡಗು, ಹಾಸನ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಕೊಪ್ಪಳ ಸೇರಿ 14 ಗ್ರೀನ್ ಝೋನ್ ಜಿಲ್ಲೆಗಳಿಗೆ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿದೆ.
ಅದರಂತೆ ಆ 14 ಜಿಲ್ಲರಗಳಲ್ಲಿ ಮಾಲ್ ಗಳು, ಥಿಯೇಟರ್ ಈಗಲೂ ಬಂದ್ ಮಾಡಲು ಸೂಚಿಸಿದೆ. ಬೇರೆ ಎಲ್ಲಾ ರೀತಿಯ ಶಾಪ್ಸ್ ಓಪನ್ ಮಾಡಲು ಅನುಮತಿ ನೀಡಿದೆ. ಜನವಸತಿ , ಮಾರ್ಕೆಟ್ ಕಾಂಪ್ಲೆಕ್ಸ್ ಗಳ ಶಾಪ್ಸ್, ಶೇ.50ರಷ್ಟು ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಹಾಗೇ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದೆ.