ಆರೋಗ್ಯವಂತ ಮಗುವಿಗಾಗಿ ಗರ್ಭಿಣಿಯರು ಹೆಚ್ಚಾಗಿ ಈ ಆಹಾರಗಳನ್ನು ಸೇವಿಸಿ
ಬುಧವಾರ, 29 ಏಪ್ರಿಲ್ 2020 (07:43 IST)
ಬೆಂಗಳೂರು : ಮಹಿಳೆಯರು ಗರ್ಭ ಧರಿಸಿದಾಗ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಇಲ್ಲವಾದರೆ ಮಗುವಿಗೆ ತೊಂದರೆಯಾಗುವ ಸಂಭವವಿರುತ್ತದೆ. ಆದಕಾರಣ ಗರ್ಭಿಣಿಯರು ಹೆಚ್ಚಾಗಿ ಈ ಆಹಾರಗಳನ್ನು ಸೇವಿಸಿ.
ಗರ್ಭಿಣಿಯರು ಹಸಿರು ಸೊಪ್ಪುಗಳು, ಸೀತಾಫಲ ಹಣ್ಣು, ಟೊಮೆಟೊ, ಸೀಬೆ ಹಣ್ಣು, ಬೀಟ್ ರೂಟ್, ಕೇಸರಿ ಹಾಲು, ಸಿಹಿ ಆಲೂಗಡ್ಡೆ, ಪ್ರೋಟೀನ್ ಯುಕ್ತ ಆಹಾರ, ವಾಲ್ ನಟ್, ಹಾಲು, ಮೊಟ್ಟೆ, ಬೀನ್ಸ್ ಕಾಳುಗಳು, ಬೆಣ್ಣೆಹಣ್ಣು, ಹಾಗೂ ಸರಿಯಾಗಿ ನೀರು ಕುಡಿದರೆ ಗರ್ಭಿಣಿಯರು ಆರೋಗ್ಯವಾಗಿರಬಹುದು, ಆರೋಗ್ಯವಂತ ಮಗುವಿಗೆ ಜನ್ಮಕೊಡಬಹುದು.