‘ನೈತಿಕ ಹೊಣೆ ಹೊತ್ತು ರಾಜೀನಾಮೆ

ಶುಕ್ರವಾರ, 15 ಏಪ್ರಿಲ್ 2022 (14:27 IST)
ತನಿಖಾಧಿಕಾರಿಗಳು ಈಶ್ವರಪ್ಪ ಬಂಧನದ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು  ಗದಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಕೇಸ್​​ನಲ್ಲೂ ಜಾರ್ಜ್ ಅವರನ್ನ ಬಂಧಿಸಿರಲಿಲ್ಲ. ಕರ್ನಾಟಕ ಪೊಲೀಸರು ತನಿಖೆ ಮಾಡುವಾಗಲೂ ಬಂಧಿಸಿರಲಿಲ್ಲ. ಕೇಸ್ CBIಗೆ ವರ್ಗಾವಣೆಯಾದಾಗಲೂ ಬಂಧನ ಆಗಿಲ್ಲ. ಕಾಂಗ್ರೆಸ್ ನಾಯಕರನ್ನ ಬಂಧಿಸಿರಲಿಲ್ಲ. ಈಗ ಇವರಿಗೆ ಯಾವ ನೈತಿಕ ಹಕ್ಕಿದೆ ಎಂದು ಸಿಎಂ ಪ್ರಶ್ನಿಸಿದ್ದಾರೆ..ತನಿಖೆಯಾಗೋವರೆಗೂ ಸುಮ್ಮನಿರಬೇಕು. ಸತ್ಯ ಹೊರ ಬರುತ್ತೆ..2 ದಿನದ ಹಿಂದೆಯೇ ರಾಜೀನಾಮೆ ಬಗ್ಗೆ’ ಈಶ್ವರಪ್ಪ ತೀರ್ಮಾನಿಸಿದ್ರು..ಕೆಲ ಹಿರಿಯರ ಸಲಹೆಯಂತೆ ರಾಜೀನಾಮೆ ಕೊಟ್ಟಿರಲಿಲ್ಲ.. ಪಕ್ಷಕ್ಕೆ ಮುಜುಗರ ಆಗಬಾರದು ಅನ್ನೋ ಕಾರಣಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ