ಮಡಿಕೇರಿ : ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಹೊಸವರ್ಷಾಚರಣೆಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ.
ಅದರಲ್ಲೂ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿರುವ ನಿರ್ಧಾರಕ್ಕೆ ನೈಟ್ ಕರ್ಫ್ಯೂ ಮಾಡುವ ಬದಲು ಬೆಳಗ್ಗೆಯಿಂದಲೇ ಕರ್ಫ್ಯೂ ಜಾರಿ ಮಾಡಿ ಎಂದು ಕೊಡಗಿನ ಹೋಟೆಲ್, ರೆಸ್ಟೋರೆಂಟ್ ಹೋಂಸ್ಟೇ, ರೆಸಾರ್ಟ್ ಮಾಲೀಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಳೆದ ಎರಡು ವರ್ಷದಿಂದ ಲಾಕ್ಡೌನ್ ಹೆಸರಲ್ಲಿ ಸರಿಯಾದ ವ್ಯಾಪಾರ ಆಗದೆ ಸಂಕಷ್ಟ ಅನುಭವಿಸಿದ್ದೇವೆ. ನಮ್ಮ ವ್ಯಾಪಾರವೆಲ್ಲ ಹಾಳಾಗಿದ್ದು ಆರ್ಥಿಕವಾಗಿ ಚೇತರಿಕೆ ಕಷ್ಟವಾಗಿದೆ. ಈಗಾಗಲೇ ಜಿಲ್ಲೆಯ ಹೊಸ ವರ್ಷದ ಸಂಭ್ರಮ ಅಚರಣೆಗೆ ಶೇಕಡಾ 100% ಹೋಂಸ್ಟೇಗಳು ಭರ್ತಿಯಾಗಿದ್ದು.
ಸರ್ಕಾರ ದಿಢೀರ್ ಅಗಿ ನೈಟ್ ಕರ್ಫ್ಯೂ ಬೇರೆ ಜಾರಿ ಮಾಡಿರುವುದರಿಂದ ಹೋಂಸ್ಟೇಗೆ ಬರುವ ಪ್ರವಾಸಿಗರು ತಮ್ಮ ಹಣವನ್ನು ವಾಪಸ್ಸು ಮಾಡಿ ನಾವು ತಮಿಳುನಾಡು, ಗೋವಾ ಕಡೆಗಳಿಗೆ ತೆರಳುತ್ತೇವೆ ಎಂದು ಹೇಳಿ ಹಣವನ್ನು ಹಿಂಪಡೆಯುತ್ತಿದ್ದಾರೆ. ಇದರಿಂದ ಮತ್ತಷ್ಟು ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.