ಉಡುಪಿ : ಜಿಲ್ಲೆಯಲ್ಲಿ ಕೋವಿಡ್ ಮಹಾಸ್ಫೋಟ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐವರು ಶಾಸಕರ ಸಭೆ ನಡೆದಿದೆ.
ಉಸ್ತುವಾರಿ ಸಚಿವ ಸುನಿಲ್ ಕುಮಾರ್ ನೇತೃತ್ವ ವಹಿಸಿದ್ದು, ಕೋವಿಡ್ ತಡೆಯುವ ಮತ್ತು ಸೋಂಕಿತರಿಗೆ ಚಿಕಿತ್ಸೆ ಕೊಡುವ ಬಗ್ಗೆ ಚರ್ಚೆ ನಡೆಸಲಾಯಿತ್ತು.
ಪ್ರತಿದಿನ 8 ಸಾವಿರ ಜನರ ಕೊರೊನ ಟೆಸ್ಟ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 54 ಸಾವಿರ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡುವ ಗುರಿಯಿದೆ. ಸಂಜೆ ಬೀಚ್ಗೆ ಪ್ರವಾಸಿಗರನ್ನು ತಡೆಯುವ ಹಿನ್ನೆಲೆಯಲ್ಲಿ ಸಂಜೆ 7 ಗಂಟೆ ನಂತರ ಬೀಚ್ ಪ್ರವೇಶ ನಿಷೇಧ ಮಾಡುತ್ತೇವೆ ಎಂದು ಸುನಿಲ್ ಕುಮಾರ್ ಹೇಳಿದರು.
ಸಂಜೆ 6:30 ನಂತರ ಬೀಚಿನಲ್ಲಿ ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡುತ್ತೇವೆ. 7 ಗಂಟೆ ನಂತರ ಬೀಚಿನಲ್ಲಿ ವಿಹರಿಸೋದದಕ್ಕೆ ನಿರ್ಬಂಧ ಹಾಕಲಾಗುವುದು ಎಂದರು.