ಹು-ಬೆಂ ಸೂಪರ್‌ಫಾಸ್ಟ್ ರೈಲು ಸೇವೆ ಪುನಾರಂಭ
ಹುಬ್ಬಳ್ಳಿ - ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಿಶೇಷ ಸೂಪರ್‌ಫಾಸ್ಟ್ ರೈಲು ಸೇವೆಯನ್ನು ಪುನಾರಂಭಿಸಲಾಗಿದೆ. ರೈಲ್ವೆ ಇಲಾಖೆ ಕಳೆದ ವಾರ ಈ ರೈಲು ಸೇವೆಯನ್ನು ರದ್ದು ಮಾಡಿತ್ತು. ರೈಲ್ವೆ ಇಲಾಖೆಯ ಈ ನಿರ್ಧಾರಕ್ಕೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ರೈಲು ಸೇವೆಯನ್ನು ಪುನಾರಂಭಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಾರ್ವಜನಿಕರು ಮತ್ತು ಹಲವು ಸಂಘಟನೆಗಳು ಮನವಿ ಮಾಡಿದ್ದವು. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಹುಬ್ಬಳ್ಳಿ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆ ಪುನರಾರಂಭವಾಗಿದೆ.
ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಪುನರಾರಂಭ ಮಾಡುವ ಕುರಿತು ನಾನು ರಾಜಸ್ಥಾನದಿಂದ ಬಂದ ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಪ್ರಸ್ತಾವಿಸಿದ್ದೆ ಎಂದು ತಿಳಿಸಿದ್ದಾರೆ.