ನಿವೃತ್ತ ಡಿಜಿ & ಐಜಿಪಿ ಶಂಕರ್ ಬಿದರಿ ( Bank account) ಬ್ಯಾಂಕ್ ಖಾತೆಗೆ ಕಳ್ಳರು ಕನ್ನ ಹಾಕಿರುವ ಘಟನೆ ನಡೆದಿದೆ.
ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಕರೆಮಾಡಿದ ಕಳ್ಳರು ನಿಮ್ಮ ಅಕೌಂಟ್ಗೆ ಪಾನ್ ಕಾರ್ಡ್ ಲಿಂಕ್ ಮಾಡಬೇಕು. ಲಿಂಕ್ (link) ಮಾಡದಿದ್ದರೆ ಖಾತೆ ಬಂದಾಗುತ್ತದೆ ಎಂದು ಹೇಳಿದ್ದಾರೆ.
ನಂತರ ಅವರಿಂದ ಒಟಿಪಿ ಪಡೆದು ಬಿದರಿ ಖಾತೆಯಲ್ಲಿದ್ದ 89 ಸಾವಿರ ರೂಪಾಯಿ ಹಣ ವಂಚನೆ ಮಾಡಿದ್ದಾರೆ. ಈ ಸಂಬಂಧ ಆಗ್ನೇಯ ವಿಭಾಗದ CEN ಠಾಣೆಗೆ ಶಂಕರ್ ಬಿದರಿ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ( FIR) ದಾಖಲಿಸಿಕೊಂಡು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.