ಪತ್ನಿಯನ್ನು ಭೇಟಿಯಾಗದೆ ದೇವೇಗೌಡರ ಜತೆ ಕಾಲ ಕಳೆಯುತ್ತಿರುವ ರೇವಣ್ಣ

Sampriya

ಗುರುವಾರ, 16 ಮೇ 2024 (18:44 IST)
ಹಾಸನ: ಮಹಿಳೆಯ ಅಪಹರಣ ಪ್ರಕರಣದಲ್ಲಿ ಜೈಲು ಸೇರಿ ಮಧ್ಯಂತರ ಜಾಮೀನು ಮೂಲಕ ಹೊರಬಂದಿರುವ ಶಾಸಕ ಎಚ್ ಡಿ ರೇವಣ್ಣ ಅವರು  ಪತ್ನಿ ಭವಾನಿ ರೇವಣ್ಣ ಅವರನ್ನು ಇಂದಿಗೂ ಭೇಟಿಯಾಗಿಲ್ಲ.

ಜೈಲಿಂದ ಹೊರಬಂದಿರುವ ರೇವಣ್ಣ ಅವರು ಸದ್ಯ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ  ಮಾಜಿ ಪ್ರಧಾನಿ, ಎಚ್ ಡಿ ದೇವೇಗೌಡ ಅವರ ನಿವಾಸದಲ್ಲಿ ರೇವಣ್ಣ ಅವರು ಇದ್ದಾರೆ.

ಬಂಧನದ ದಿವಸವೂ ರೇವಣ್ಣ ಅವರು ದೇವೇಗೌಡ ಮನೆಯಲ್ಲೇ ತಂಗಿದ್ದರು. ಇನ್ನೂ ವಿಶೇಷ ಎಂಬಂತೆ ಬಿಡುಗಡೆಯಾಗಿ ಮೂರು ದಿನ ಕಳೆದರು ರೇವಣ್ಣ ಅವರು ಪತ್ನಿ ಭವಾನಿ ಅವರನ್ನು ಭೇಟಿ ಮಾಡಿಲ್ಲ.

ಇನ್ನೂ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ವೈರಲ್ ಪ್ರಕರಣ ಸಂಬಂಧ ಇದೀಗ ಭವಾನಿಗೂ ಸಂಕಷ್ಟ ಎದುರಾಗಿತ್ತು. ಅದಲ್ಲದೆ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರ ಹೆಸರು ಉಲ್ಲೇಖವಾಗಿದೆ.

ಇನ್ನೂ ಎಸ್‌ಐಟಿ ತಂಡಕ್ಕೆ ತನಿಖೆ ವೇಳೆ ಭವಾನಿ ವಿರುದ್ಧ ಸಾಕ್ಷಿ ಸಿಕ್ಕರೂ ಅವರಿಗೂ ಸಂಕಷ್ಟ ಎದುರಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ