ಅವ್ಯವಹಾರದ ಬಗ್ಗೆ ಪ್ರಶ್ನಿಸಿದ ರೈತನ ಮೇಲೆ ಹರಿಹಾಯ್ದ ರೇವಣ್ಣ

ಶನಿವಾರ, 14 ಸೆಪ್ಟಂಬರ್ 2019 (13:11 IST)
ಹಾಸನ : ರೈತರಿಗೆ ಟಾರ್ಪಲ್  ವಿತರಣೆಗೆಯ ಕುರಿತಾಗಿ ಹಾಸನದ ಹಿರಿಯ ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ಹಳೆಕೋಟೆಯಲ್ಲಿ ನಡೆದ ಸಹಾಯಧನದಲ್ಲಿ ರೈತರಿಗೆ ಟಾರ್ಪಲ್ ವಿತರಣೆ ಸಮಾರಂಭದಲ್ಲಿ ರೈತರು, ಸರ್, ಹೊರಗಡೆ 1050 ರೂಪಾಯಿಗೆ ಟಾರ್ಪಲ್ ಸಿಗುತ್ತೆ. ಆದ್ರೆ ಸರ್ಕಾರ 1300ರೂ.ಗೆ ಖರೀದಿ ನೀಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.


ರೈತರ ಆಕ್ಷೇಪದಿಂದ ಸಿಟ್ಟಿಗೆದ್ದ ರೇವಣ್ಣ, ಏಯ್, ಬೇಕಾದ್ರೆ ತಗೊಳ್ಳಿ, ಬೇಡದಿದ್ರೆ ಬಿಡಿ. ಕೆಳ ಹಂತದ ಅಧಿಕಾರಿಗಳು ಏನೂ ಮಾಡಲ್ಲ. ಮೇಲಾಧಿಕಾರಿಗಳು ಹಣ ಹೊಡ್ಕೊಂಡು ನಿಮ್ಮ ಮೇಲೆ ಹಾಕ್ತಾರೆ. ಇದೇನು ನನಗೆ ಗೊತ್ತಿಲ್ಲದಿರುವ ಬೇಳೆಕಾಳಲ್ಲ ಎಂದು ದುರಂಕಾರದಿಂದ ಮಾತನಾಡಿದ್ದಾರೆ.


ಒಬ್ಬ ಜವಬ್ದಾರಿಯುತ ರಾಜಕಾರಣಿಯಾಗಿ ರೈತರಿಗೆ ಆಗುವ ಮೋಸವನ್ನು ತಡೆಯುವ ಬದಲು ರೈತರ ವಿರುದ್ದವೇ ಕಿಡಿಕಾರಿದ್ದು ರೇವಣ್ಣ ಅವರ ಬೇಜವಬ್ದಾರಿಯನ್ನು ಸೂಚಿಸುತ್ತದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ