ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಪರಿಶೀಲನೆ

ಶನಿವಾರ, 27 ಅಕ್ಟೋಬರ್ 2018 (17:42 IST)
ವಿಮಾನ ನಿಲ್ದಾಣದಲ್ಲಿ ಹೈದ್ರಾಬಾದಿನ ಜಿ.ಎಂ.ಆರ್. ಕಂಪನಿಯವರು ವಿಮಾನ ಹಾರಾಟ ತರಬೇತಿ ಪ್ರಾರಂಭಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

 ಕಲಬುರಗಿ ವಿಮಾನ ನಿಲ್ದಾಣವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಈ ವಿಮಾನ ನಿಲ್ದಾಣದಲ್ಲಿ ಈಗಾಗಲೇ ವಿಶೇಷ ಸಂದರ್ಭಗಳಲ್ಲಿ ಚಾರ್ಟರ್ಡ ವಿಮಾನಗಳು ಬಂದಿಳಿಯುತ್ತಿವೆ. ಕಲಬುರಗಿಯಿಂದ ಬೆಂಗಳೂರು ಹಾಗೂ ಹೈದ್ರಾಬಾದ್‍ಗಳಿಗೆ ಸಾರ್ವಜನಿಕರು ವಿಮಾನದಲ್ಲಿ ಸಂಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಜಿ.ಎಂ.ಆರ್. ಕಂಪನಿಯು ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಮುಂದೆ ಬಂದಿರುವುದು ಸಂತೋಷದ ಸಂಗತಿಯಾಗಿದೆ. ವಿಮಾನ ಹಾರಾಟ ತರಬೇತಿ ಪ್ರಾರಂಭಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಪಡೆಯಬೇಕಾಗಿರುವ ಅವಶ್ಯಕ ಪರವಾನಿಗೆಗಳ ಕುರಿತು ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.  

 ಕಲಬುರಗಿ ವಿಮಾನ ನಿಲ್ದಾಣದಲ್ಲಿ ರನ್‍ವೇ, ಮಾರ್ಕಿಂಗ್, ಲೈಟಿಂಗ್ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಒಂದು ಕಚೇರಿ ಸೌಲಭ್ಯ ಕಲ್ಪಿಸಿದಲ್ಲಿ ಜಿ.ಎಂ.ಆರ್. ಕಂಪನಿಯಿಂದ ವಿಮಾನಗಳಿಗೆ ಇಂಧನ ಮರು ಭರ್ತಿ ಸೌಲಭ್ಯದೊಂದಿಗೆ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲಾಗುವುದು ಎಂದು ಹೈದ್ರಾಬಾದಿನ ಜಿ.ಎಂ.ಆರ್. ಕಂಪನಿಯ ಮುಖ್ಯಸ್ಥ ಹೇಮಂತ ಪಾಟೀಲ ವಿವರಿಸಿದರು.

ಜಿ.ಎಂ.ಆರ್. ಕಂಪನಿಯ ಎಪಿಎಫ್‍ಟಿ ಯಿಂದ  ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಸರ್ಕಾರವು ಎನ್.ಓ.ಸಿ. ನೀಡಿದಲ್ಲಿ ವಿಮಾನ ಹಾರಾಟ ತರಬೇತಿಗೆ ಪರವಾನಿಗೆ ನೀಡುವಂತೆ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಎವಿಯೇಶನ್ ಅವರಿಗೆ ಪತ್ರ ಬರೆಯಲಾಗುವುದು. ಅವರಿಂದ ಪರವಾನಿಗೆ ದೊರೆತ ನಂತರ ವಿಮಾನ ಹಾರಾಟ ತರಬೇತಿ ಪ್ರಾರಂಭಿಸುವುದರ ಜೊತೆಗೆ ವಿಮಾನ ನಿರ್ವಹಣೆ ಸಹ ಪ್ರಾರಂಭಿಸಲಾಗುವುದು. ಇದಕ್ಕಾಗಿ ವಿಮಾನ ನಿಲುಗಡೆಗೆ ಹ್ಯಾಂಗರ್ ಅವಶ್ಯಕತೆಯಿದ್ದು, ಹ್ಯಾಂಗರ್ ನಿರ್ಮಿಸಿ ಕೊಟ್ಟಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ಬೇರೆ  ಪಟ್ಟಣಗಳಿಗೆ ವಿಮಾನ ಹಾರಾಟ ಸಹಿತ ಪ್ರಾರಂಭಿಸಬಹುದೆಂದು ತಿಳಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ