ಮಂಗಳೂರು ಹಿಂಸಾಚಾರ ಯಶಸ್ವಿಯಾಗಿ ಹತ್ತಿಕ್ಕಿದ ಪೊಲೀಸರಿಗೆ ಸರ್ಕಾರದಿಂದ ಬಹುಮಾನ

ಗುರುವಾರ, 26 ಡಿಸೆಂಬರ್ 2019 (13:09 IST)
ಬೆಂಗಳೂರು : ಮಂಗಳೂರು ಹಿಂಸಾಚಾರ ಯಶಸ್ವಿಯಾಗಿ ಹತ್ತಿಕ್ಕಿದ ಹಿನ್ನಲೆ ಮಂಗಳೂರು ಪೊಲೀಸರಿಗೆ ಸರ್ಕಾರದಿಂದ ಬಹುಮಾನ ನೀಡಲಾಗಿದೆ.


ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವೇಳೆ ಹಿಂಸಾಚಾರ ತಡೆಯಲು ಶ್ರಮಿಸಿದ ಪೊಲೀಸರಿಗೆ ಬಹುಮಾನ ನೀಡಲಾಗಿದೆ.


149 ಪೊಲೀಸರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ಡಿಸಿಪಿ, ಎಸಿಪಿ, ಪಿಐ, 8 ಅಧಿಕಾರಿಗಳಿಗೆ ತಲಾ 50 ಸಾವಿರ ನೀಡಲಾಗಿದೆ. ಹಾಗೇ ಕದ್ರಿ ಪಿಐ ಶಾಂತಾರಾಮ್ ಗೂ 10 ಸಾವಿರ ರೂ. ಬಹುಮಾನ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ