ಇಂದು ಕಂಕಣ ಸೂರ್ಯಗ್ರಹಣ; ಬಾನಂಚಿನಲ್ಲಿ ಹೊಸ ಕೌತುಕ

ಗುರುವಾರ, 26 ಡಿಸೆಂಬರ್ 2019 (07:21 IST)
ಬೆಂಗಳೂರು : ಇಂದು ಕಂಕಣ ಸೂರ್ಯಗ್ರಹಣ ಗೋಚರವಾಗಲಿದ್ದು, ಈ ವಿಸ್ಮಯ ಕ್ಷಣಗಳನ್ನು ನೋಡಲು ಕೋಟ್ಯಂತರ ಜನರು ಕಾತುರದಿಂದ ಕಾದು ಕುಳಿತಿದ್ದಾರೆ.



ಇಂದು ಬೆಳಿಗ್ಗೆ 8 ಗಂಟೆ 6 ನಿಮಿಷಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಲಿದ್ದು, 9ಗಂಟೆ 30 ನಿಮಿಷಕ್ಕೆ ಮಧ್ಯಕಾಲ ಹಾಗೂ  11 ಗಂಟೆ 11 ನಿಮಿಷ ಮೋಕ್ಷ ಕಾಲವಾಗಿದೆ.ಚಂದ್ರನ ಪರದಿಯ ಸುತ್ತಲೂ ಸೂರ್ಯ ಬಿಂಬ ಗೋಚರವಾಗಲಿದೆ.


ಇಂದು ಗ್ರಹಣದ ಹಿನ್ನಲೆಯಲ್ಲಿ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿದ್ದು, ಭಕ್ತರಿಗೆ ದರ್ಶನ ಭಾಗ್ಯ ಲಭಿಸುವುದಿಲ್ಲ. ಗ್ರಹಣ ಮುಗಿದ ಬಳಿಕ ದೇವಾಲಯಗಳನ್ನು ಶುದ್ಧಿಕರಿಸಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ