ಪ್ರಜ್ವಲ್ ಹುಡುಕಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿದ ಆರ್‌ಜೆಪಿ ನಾಯಕ ನಾಗೇಶ್ ಅರೆಸ್ಟ್‌

Sampriya

ಶನಿವಾರ, 11 ಮೇ 2024 (17:40 IST)
ಬೆಂಗಳೂರು:  ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಹೇಳಿದ ರಾಜ್ಯ ಜನತಾ ಪಕ್ಷದ (ಆರ್‌ಜೆಪಿ) ನಾಯಕ ಎನ್ ನಾಗೇಶ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಬೆಂಗಳೂರಿನಲ್ಲಿ ಆರಂಭವಾದ ಅಭಿಯಾನದಲ್ಲಿ ರೇವಣ್ಣ ಅವರ ಸ್ಥಳದ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭರವಸೆ ನೀಡಿದ್ದರು.  ಆದರೆ, ಅಧಿಕಾರಿಗಳು ಕ್ಷಿಪ್ರವಾಗಿ ಮಧ್ಯಪ್ರವೇಶಿಸಿ ನಾಗೇಶ್ ಅವರನ್ನು ವಶಕ್ಕೆ ಪಡೆದು ಪೋಸ್ಟರ್ ಗಳನ್ನು ತೆಗೆದರು.

ರೇವಣ್ಣ ವಿರುದ್ಧ ಹಲವು ದಿನಗಳ ಹಿಂದೆ ಲೈಂಗಿಕ ದೌರ್ಜನ್ಯ ಸಂಬಂಧ ಎಫ್‌ಐಆರ್ ದಾಖಲಾಗಿ, ನೋಟಿಸ್ ನೀಡಿದ್ದರೈ ಇದುವರೆಗೂ ವಿಚಾರಣೆಗೆ ಹಾಜರಾಗದ ವಿದೇಶದಲ್ಲಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪೊಲೀಸರು ಕಾನೂನು ತನಿಖೆ ನಡೆಸುತ್ತಾರೆ ಮತ್ತು ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ವಿಶ್ವಾಸ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ