ರಾಜ್ಯಪಾಲರ ಅಂಗಳಕ್ಕೆ ಪೆನ್‌ಡ್ರೈವ್ ಪ್ರಕರಣ: ದೂರು ನೀಡಲು ಮುಂದಾದ ಜೆಡಿಎಸ್‌

Sampriya

ಗುರುವಾರ, 9 ಮೇ 2024 (14:18 IST)
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರಾಜ್ಯಪಾಲರ ಭೇಟಿಗೆ ನಿರ್ಧರಿಸಿದ್ದಾರೆ.

ಗುರುವಾರ ಮಧ್ಯಾಹ್ನ 3ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಲು ಜೆಡಿಎಸ್ ನಿಯೋಗ ನಿರ್ಧರಿಸಿದೆ. ತನಿಖೆಯನ್ನು ಎಸ್‌ಐಟಿ ಪಾರದರ್ಶಕವಾಗಿ ನಡೆಸುತ್ತಿಲ್ಲ ಎಂದು ದೂರು ನೀಡಲು ಜೆಡಿಎಸ್ ನಿಯೋಗ ಮುಂದಾಗಿದೆ.

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದು, ಅವರಿಗೆ ತನಿಖೆ ಬೇಕಿಲ್ಲ. ಕೇವಲ ಪ್ರಚಾರ ಬೇಕಾಗಿದೆ. 15 ದಿನದ ಎಸ್‌ಐಟಿ ತನಿಖೆಯ ಸಾಧನೆ ಏನು?. ಇನ್ನೂ ಅಪಹರಣ ಆದ ಮಹಿಳೆಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಈ ಮಧ್ಯೆ, ಎಸ್‌ಐಟಿ ಪಾರದರ್ಶಕವಾಗಿ ತನಿಖೆ ನಡೆಸ್ತಿಲ್ಲ ಎಂಬ ಜೆಡಿಎಸ್ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಗೃಹ ಸಚಿವ ಜಿ ಪರಮೇಶ್ವರ್, ಎಸ್‌ಐಟಿ ತನಿಖೆ ಮಾಡುತ್ತಿರುವುದರ ಮಾಹಿತಿ ಹಂಚಲು ಮಾಡಲು ಆಗಲ್ಲ. ಅವರು ದೂರು ಕೊಡಲಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ